ಬೆಂಗಳೂರು: ವೀಕೆಂಡ್ ಕರ್ಫ್ಯೂ ಮುಂದುವರಿಸದಂತೆ ಹೊಟೇಲ್ ಮಾಲಕರ ಸಂಘದ ಮನವಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ವೀಕೆಂಡ್ ಕರ್ಫ್ಯೂಗೆ ಬೆಂಗಳೂರು ಹೊಟೇಲ್ ಮಾಲಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. 
ವೀಕೆಂಡ್ ಕಫ್ರ್ಯೂ ಮುಂದುವರೆಸಿದರೆ ಅದನ್ನು ಪಾಲಿಸಬೇಕೆ ಬೇಡವೇ ಎಂಬ ಬಗ್ಗೆ ಸದ್ಯದಲ್ಲಿಯೇ ನಿರ್ಧಾರ ಮಾಡುತ್ತೇವೆ ಎಂದು ಬೆಂಗಳೂರು ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ. 
ಮಹಾರಾಷ್ಟ್ರದಲ್ಲಿ ನಮಗಿಂತ ಹೆಚ್ಚು ಕೊರೋನ ಸೋಂಕಿವೆ. ಆದರೆ, ಅಲ್ಲಿ ವೀಕೆಂಡ್, ಲಾಕ್‍ಡೌನ್ ಇಲ್ಲ. ನಮ್ಮಲ್ಲಿ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿರುವ ಕ್ರಮ ಅವೈಜ್ಞಾನಿಕವಾಗಿದೆ. ಈ ಬಾರಿ ಇದನ್ನು ಸರಕಾರ ಹಿಂಪಡೆಯಲ್ಲಿದ್ದಾರೆ ಎಂಬ ವಿಶ್ವಾಸವನ್ನು ಅವರು ಹೇಳಿದ್ದಾರೆ. 
ಸೋಂಕು ಜಾಸ್ತಿಯಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆಯಿದೆ. ಆದರೂ ಸರಕಾರ ವೀಕೆಂಡ್ ಕಫ್ರ್ಯೂನಂತಹ ಕ್ರಮವನ್ನು ಕೈಗೊಂಡಿರುವುದು ನಮ್ಮ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. 
ನೈಟ್ ಕಫ್ರ್ಯೂ ಸಮಯವನ್ನು ಬದಲಾಯಿಸಬೇಕೆಂದು ನಾವು ಪ್ರಧಾನಿ ಹಾಗೂ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇವೆ. ಸರಕಾರದ ಹಿಂದಿನ ಮಾರ್ಗಸೂಚಿಯನ್ನು ನೋಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು