ಬ್ರಾಹ್ಮಣರನ್ನು ಅವಮಾನಿಸಲಾಗಿದೆಯೆಂದು ಆರೋಪ | ಖ್ಯಾತ ನಟ ಚೇತನ್ ವಿರುದ್ಧ ದೂರು ದಾಖಲು..

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಖ್ಯಾತ ನಟ ಚೇತನ್ ವಿರುದ್ಧ ದೂರು ದಾಖಲಿಸಲಾಗಿದೆ.

ಬ್ರಾಹ್ಮಣ ಸಮುದಾಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ, ಕುರಿತು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ನಟ ಚೇತನ್ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ. ಚೇತನ್ ಹೇಳಿಕೆಯಿಂದಾಗಿ ಬ್ರಾಹ್ಮಣರಿಗೆ ನೋವಾಗಿದೆ. ನಟ ಚೇತನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ನಟ ಚೇತನ್ ಕೂಡಲೇ ಕ್ಷಮೆ ಯಾಚಿಸಬೇಕು, ಯಾರ ವಿರುದ್ದವೂ ರೀತಿ ಮಾತನಾಡಬಾರದು ಎಂದು ತಾಕೀತು ಮಾಡಿದ್ದಾರೆ.

ನಿನ್ನೆ ತಾನೇ ‘ಬ್ರಾಹ್ಮಣ್ಯವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸುತ್ತದೆ. ನಾವು ಬ್ರಾಹ್ಮಣ್ಯವನ್ನು ಬೇರು ಸಹಿತ ಕಿತ್ತುಹಾಕಬೇಕು’ ಎಂಬ ಅಂಬೇಡ್ಕರ್ ಹೇಳಿಕೆಯನ್ನೂ,  ‘ಎಲ್ಲರೂ ಸರಿಸಮಾನರಾಗಿ ಜನಿಸಿದರೆ, ಬ್ರಾಹ್ಮಣರು ಮಾತ್ರ ಅತ್ಯುನ್ನತರು ಮತ್ತು ಉಳಿದವರೆಲ್ಲರೂ ಕೆಳಹಂತದವರು ಮತ್ತು ಅಸ್ಪ್ರಶ್ಯರು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಇದೊಂದು ದೊಡ್ಡ ವಂಚನೆ ’ ಎಂಬ  ಪೆರಿಯಾರ್ ಹೇಳಿಕೆಯನ್ನೂ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.

ಫೇಸ್ಬುಕ್ ಲೈವಿನಲ್ಲೂ ಬಂದಿದ್ದ ನಟ ಚೇತನ್, ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ಮಾತನಾಡಿದ್ದರು. ಬುದ್ಧ, ಬಸವ, ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಒಳ್ಳೆಯ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕೆಂದು ಸೂಚ್ಯವಾಗಿ ಕರೆ ನೀಡಿದ್ದರು. ಮತ್ತು ಸಾವಿರಾರು ವರ್ಷಗಳಿಂದ ಬ್ರಾಹ್ಮಣ್ಯವು ಇವರ ವಿಚಾರಗಳನ್ನು ಕೊಂದು ಹಾಕಿದೆಯೆಂದು ಆರೋಪಿಸಿದ್ದರಲ್ಲದೇ ಬ್ರಾಹ್ಮಣ್ಯವನ್ನು ವಿರೋಧಿಸಿದ್ದ ಬುದ್ಧನನ್ನು ಒಂಭತ್ತನೇ ದಶಾವತಾರವನ್ನಾಗಿ ಮಾಡಲಾಗಿದೆಯೆಂದೂ ಟೀಕಿಸಿದ್ದರು.

ಇತ್ತೀಚೆಗೆ ನಟ ಚೇತನ್ ಅವರು ಸಕಾಲಿಕ ಆಗುಹೋಗುಗಳ ಬಗೆಗೆ ಧ್ವನಿಯೆತ್ತುತ್ತಿದ್ದಾರೆ ಹಾಗೂ ಹಲವು ರೀತಿಯ ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು