ಯುಎಇಗೆ ಮರಳುವ ಸಿದ್ಧತೆಯಲ್ಲಿ ಉದ್ಯಮಿ ಬಿ.ಆರ್.ಶೆಟ್ಟಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ದುಬೈ(14/11/2020): ಆರ್ಥಿಕ ಅವ್ಯವಹಾರ ಹಾಗೂ ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲು ಯುಎಇ ಬಿಟ್ಟು ಭಾರತಕ್ಕೆ ಬಂದಿದ್ದ ಎನ್‌ಎಂಸಿ ಹೆಲ್ತ್‌ ಎನ್ನುವ ಬೃಹತ್‌ ಖಾಸಗಿ ಆರೋಗ್ಯ ಸಂಸ್ಥೆಯ ಸಂಸ್ಥಾಪಕ, ಉಡುಪಿ ಮೂಲದ ಉದ್ಯಮಿ ಬಿ ಆರ್‌ ಶೆಟ್ಟಿ ಅವರು ಮತ್ತೆ ಯುಎಇಗೆ ತೆರಳಲು ಸಿದ್ಧತೆ‌ ನಡೆಸುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಯುಎಇಯ ನ್ಯಾಯ ಪ್ರಕ್ರಿಯೆಯ ಮೇಲೆ ತನಗೆ ವಿಶ್ವಾಸವಿದ್ದು, ಕೂಡಲೇ ಅಲ್ಲಿಗೆ ಹೋಗುವ ಸನ್ನಾಹದಲ್ಲಿದ್ದೇನೆ ಎಂದು ಸದ್ಯ ಭಾರತದಲ್ಲಿರುವ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಯುಎಇ ಅಧಿಕಾರಿಗಳಿಗೆ ಸತ್ಯವನ್ನು ಮನವರಿಕೆ ಮಾಡಿಕೊಡುತ್ತೇನೆ. ಕಂಪೆನಿ, ಸಿಬ್ಬಂದಿಗಳಿಗೆ ಹಾಗೂ ಪಾಲುದಾರರಿಗೆ ಆದ ನಷ್ಟವನ್ನು ಭರಿಸುತ್ತೇನೆ. ನಾನು ಯುಎಇಯಿಂದ ಪರಾರಿಯಾಗಿಲ್ಲ. ಖಾಯಿಲೆ ಬಿದ್ದಿದ್ದ ಸಹೋದರರನ್ನು ನೋಡಲು ಫೆಬ್ರವರಿಯಲ್ಲಿ ಭಾರತಕ್ಕೆ ಬಂದಿದ್ದೆ. ಅವರು ಮಾರ್ಚ್ ತಿಂಗಳಲ್ಲಿ ಮರಣ ಹೊಂದಿದ್ದಾರೆ ಎಂದು ಹೇಳಿದರು.

ನನಗೆ ವಂಚಿಸಿದವರು ಯಾರೆಂದು ತಿಳಿದಿದೆ. ಇವರನ್ನು ಕಾನೂನಿನ ಮುಂದೆ ತರಲು ನಾನು ಯುಎಇಗೆ ಹೋಗುತ್ತಿದ್ದೇನೆ. ಸದ್ಯ ಈ ವಂಚಕರ ವಿರುದ್ಧ ಭಾರತದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ದೂರು‌ ಸಲ್ಲಿಸಿದ್ದೇನೆ ಎಂದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು