ಬಿಪಿಎಲ್ ಕುಟುಂಬದವರಿಗೆ ತಲಾ 5 ಸಾವಿರ ಪರಿಹಾರ ಘೋಷಿಸಿದ ಹರಿಯಾಣ ಸರ್ಕಾರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಹರಿಯಾಣ: ಹರಿಯಾಣದಲ್ಲಿ ಕೊರೊನಾ ಪ್ರಕರಣ ಹೆಚ್ಚಳದ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್​ಡೌನ್​​ ಜಾರಿ ಮಾಡಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಕಾರ್ಮಿಕರು ಸೇರಿದಂತೆ ಬಡವರ್ಗದ ಜೀವನ ನಿರ್ವಹಣೆಗೆ ತೊಂದರೆ ಆಗಬಾರದೆಂಬ ಹಿನ್ನೆಲೆ ಸಿಎಂ ಮನೋಹರ್ ಲಾಲ್ ಕಟ್ಟರ್​ ಸರ್ಕಾರ ಕೊರೊನಾ ಪರಿಹಾರ ಹಣ ನೀಡಲು ಮುಂದಾಗಿದೆ.

ಹರಿಯಾಣ ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡ್​​​ಹೊಂದಿರುವ ಕುಟುಂಬಗಳಿಗೆ(ಬಡತನ ರೇಖೆಗಿಂತ ಕೆಳಗಿರುವವರಿಗೆ) ಕೊರೊನಾ ಪರಿಹಾರವಾಗಿ ತಲಾ 5 ಸಾವಿರ ರೂಪಾಯಿ ಹಣ ನೀಡುವುದಾಗಿ ಗೃಹ ಸಚಿವ ಅನಿಲ್​ ವಿಜ್​ ಘೋಷಣೆ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಅಲೆ ಅಬ್ಬರ ತಗ್ಗಿಸಲು ಕಳೆದ ಭಾನುವಾರ ಹರಿಯಾಣ ಸರ್ಕಾರ ಲಾಕ್​ಡೌನ್ ವಿಸ್ತರಣೆ ಮಾಡಿದೆ. ಮೇ 10ರಿಂದ 17ರವರೆಗೆ ಒಂದು ವಾರದ ಕಾಲ ‘ಸುರಕ್ಷಿತ್​ ಹರಿಯಾಣ’ ಹೆಸರಲ್ಲಿ ಮಾರ್ಗಸೂಚಿ ಜಾರಿ ಮಾಡಲಾಗಿದೆ. ಇದರ ಅಡಿ ಮೊದಲನೇ ಲಾಕ್​ಡೌನ್ ನಿಯಮಗಳ​ ಜೊತೆಗೆ ಹಲವು ಕಠಿಣ ನಿಯಮಗಳನ್ನ ಸೇರಿಸಲಾಗಿದೆ. ಮದುವೆ, ಅಂತ್ಯಸಂಸ್ಕಾರ ಸೇರಿದಂತೆ ಯಾವುದೇ ಸ್ಥಳದಲ್ಲಿ 11 ಕ್ಕಿಂತ ಹೆಚ್ಚು ಜನರು ಸೇರದಂತೆ ಕಠಿಣ ನಿರ್ಬಂಧ ಹೇರಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು