ಬೆಂಗಳೂರು(15-02-2021): ಬಿಪಿಎಲ್ ಕಾರ್ಡ್ ಹಿಂದಿರುಗಿಸಬೇಕು ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಸ್ವಪಕ್ಷೀಯ ಸಚಿವರೇ ಚೀಮಾರಿಯನ್ನು ಹಾಕಿದ್ದು, ಯಾವುದೇ ನಿರ್ಧಾರವನ್ನು ಏಕಾಏಕಿ ಜಾರಿ ಮಾಡುವ ಮೊದಲು ಸಚಿವ ಸಂಪುಟದಲ್ಲಿ ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ.
ಟಿವಿ, ಫ್ರಿಡ್ಜ್, ಬೈಕ್, 5 ಎಕರೆ ಜಮೀನು ಇರುವವರು ಬಿಪಿಎಲ್ ಕಾರ್ಡ್ ಹಿಂದಿರುಗಿಸಿ ಎಂದು ಉಮೇಶ್ ಕತ್ತಿ ಇತ್ತೀಚೆಗೆ ಹೇಳಿಕೆಯನ್ನು ನೀಡಿದ್ದರು. ಈ ಬಗ್ಗೆ ವಿಪಕ್ಷ ಮತ್ತು ಸ್ವಪಕ್ಷೀಯ ನಾಯಕರಿಂದಲೇ ವ್ಯಾಪಕವಾದಂತಹ ವಿರೋಧ ವ್ಯಕ್ತವಾಗಿತ್ತು.
ಟಿವಿ, ಫ್ರಿಡ್ಜ್ ಎಲ್ಲರ ಮನೆಯಲ್ಲಿಯೂ ಇರುತ್ತದೆ. ಬೈಕ್ ನ್ನು ಸಾಲ ಮಾಡಿ ಕೊಂಡುಕೊಳ್ಳುತ್ತಾರೆ. ಹೀಗಿರುವಾಗ ಬಿಪಿಎಲ್ ಕಾರ್ಡ್ ನ್ನೇ ರದ್ದು ಮಾಡುವುದು ಎಷ್ಟು ಸರಿ? ನಿಜವಾದ ಬಡತನವನ್ನು ಜನರ ಆರ್ಥಿಕ ಮಟ್ಟದಿಂದ ಅಳೆಯಬೇಕು ಎಂದು ವ್ಯಾಪಕವಾದಂತಹ ವಿರೋಧ ವ್ಯಕ್ತವಾಗಿದೆ.