ಬೋರಿಸ್ ಜಾನ್ಸನ್ ಭಾರತ ಪ್ರವಾಸ ರದ್ದು| 2021ರ ಗಣರಾಜ್ಯೋತ್ವದ ಮುಖ್ಯ ಅತಿಥಿಯಾಗಬೇಕಿದ್ದ ಬ್ರಿಟೀಷ್ ಪ್ರಧಾನಿ

Boris Johnson
Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಂಡನ್(06-01-2021): ಬ್ರಿಟೀಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಈ ವರ್ಷ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಜಾನ್ಸನ್ ಮುಖ್ಯ ಅತಿಥಿಯಾಗಬೇಕಿತ್ತು.  ಕುರಿತು ಡಿಸೆಂಬರ್ ನಲ್ಲಿ ಅವರಿಗೆ ಆಹ್ವಾನವನ್ನು ನೀಡಲಾಗಿತ್ತು. ಬೋರಿಸ್ ಜಾನ್ಸನ್ ಆಹ್ವಾನವನ್ನು ಸ್ವೀಕರಿಸಿ ಭಾರತಕ್ಕೆ ಬರುವ ಭರವಸೆಯನ್ನು ನೀಡಿದ್ದರು.

ಬೋರಿಸ್ ಜಾನ್ಸನ್ ಗಣರಾಜ್ಯೋತ್ಸವದ ದಿನ ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಯುಕೆನಲ್ಲಿ ಸಾವಿರಾರು ಜನರ ಮೇಲೆ ಪರಿಣಾಮ ಬೀರಿದ ಹೊಸ ಕರೋನವೈರಸ್ ನಿಂದ ಯುನೈಟೆಡ್ ಕಿಂಗ್ಡಮ್ನಲ್ಲಿ ಹೊಸ ಲಾಕ್ ಡೌನ್ ಘೋಷಿಸಲಾಗಿದೆ.  ಕಳೆದ ರಾತ್ರಿ ಘೋಷಿಸಿದ ರಾಷ್ಟ್ರೀಯ ಲಾಕ್‌ಡೌನ್ ಮತ್ತು ಹೊಸ ಕರೋನವೈರಸ್ ರೂಪಾಂತರವು ವೇಗದಲ್ಲಿ ಹರಡುತ್ತಿರುವುದರಿಂದ, ಯುಕೆ ಯಲ್ಲಿ ಉಳಿಯುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು