ಮುಂಬೈ(18-02-2021): ವಿಚ್ಛೇದನಕ್ಕೆ ಮಹಿಳೆಯೊಬ್ಬಳು ತಂಬಾಕು ಅಗಿಯುತ್ತಾಳೆ ಎನ್ನುವ ಕಾರಣ ಸಾಕಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ನಾಗ್ಪುರ ನಿವಾಸಿಯೊಬ್ಬರು ಸಲ್ಲಿಸಿದ ವಿವಾಹ ವಿಚ್ಛೇದನ ಮನವಿಯನ್ನು ಕೋರ್ಟ್ ವಜಾಗೊಳಿಸಿದೆ.ನ್ಯಾಯಮೂರ್ತಿ ಎ.ಎಸ್.ಚಂದೂರ್ಕರ್ ಮತ್ತು ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ ಅವರ ವಿಭಾಗೀಯ ಪೀಠವು 42 ವರ್ಷ ವಯಸ್ಸಿನ ದಂಪತಿಗಳು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿದೆ.
ತಂಬಾಕು ಅಗಿಯುವ ಅಭ್ಯಾಸಕ್ಕೆ ಸಂಬಂಧಿಸಿದಂತೆ ವಿಚ್ಛೇದನದ ಸುಗ್ರೀವಾಜ್ಞೆಯನ್ನು ನೀಡಲು ಆಗುವುದಿಲ್ಲ ಎಂದು ನ್ಯಾಯಪೀಠ ಮನವಿಯನ್ನು ತಳ್ಳಿಹಾಕಿದೆ. ಬೌದ್ಧ ವಿಧಿಗಳು ಮತ್ತು ಆಚರಣೆಗಳಿಗೆ ಅನುಗುಣವಾಗಿ ಜೂನ್ 2003 ರಲ್ಲಿ ಈ ದಂಪತಿಗಳು ವಿವಾಹವಾಗಿದ್ದರು. ಅವರಿಗೆ ಓರ್ವ ಮಗಳು ಮತ್ತು ಮಗ ಇದ್ದಾರೆ.