ಹೊಸದೆಹಲಿ(12/10/2020): ಟಿಆರ್ ಪಿ ವಂಚನೆಯ ಆರೋಪದಿಂದ ತೀವ್ರ ಮುಜುಗರ ಅನುಭವಿಸಿದ್ದ ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ವಾಹಿನಿಯ ವಿರುದ್ಧ ಬಾಲಿವುಡ್ ಸಿನಿಮಾ ಉದ್ಯಮ ಮತ್ತು ಅದರ ಸದಸ್ಯರು ತಿರುಗಿಬಿದ್ದಿದ್ದಾರೆ.
‘ರಿಪಬ್ಲಿಕ್ ಟಿವಿ’ ಮತ್ತು ‘ಟೈಮ್ಸ್ ನೌ’ ವಾಹಿನಿಗಳು ಬೇಜವಾಬ್ದಾರಿ, ಅವಹೇಳನಕಾರಿ ಹಾಗೂ ಮಾನಹಾನಿಕರ ಟೀಕೆಗಳನ್ನು ಪ್ರಸಾರ ಮಾಡುತ್ತಿದ್ದು, ಇದಕ್ಕೆ ತಡೆ ನೀಡಬೇಕು ಎಂದು ದೆಹಲಿ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ, ವರದಿಗಾರ ಪ್ರದೀಪ್ ಭಂಡಾರಿ, ಟೈಮ್ಸ್ ನೌ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್, ಗ್ರೂಪ್ ಎಡಿಟರ್ ನವಿಕಾ ಕುಮಾರ್ ಮೊದಲಾದವರು ಮಾಧ್ಯಮಗಳಲ್ಲಿ ಬಾಲಿವುಡ್ ತಾರೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸುವುದು/ಪ್ರಸಾರ ಮಾಡುವುದಕ್ಕೆ ತಡೆ ನೀಡಬೇಕು ಎಂದು ಉದ್ಯಮಿಗಳು ಆಗ್ರಹಿಸಿದ್ದಾರೆ.