ನವದೆಹಲಿ: ಬಾಲಿವುಡ್ ಖ್ಯಾತ ಚಲನಚಿತ್ರ ನಟ ಅಮೀರ್ ಖಾನ್ ಅವರಿಗೆ ಕೋವಿಡ್ -19 ದೃಢಪಟ್ಟಿದೆ. ಕೊರೋನಾ ಪ್ರೊಟೋಕಾಲ್ ಮೇರೆಗೆ ಸ್ವಯಂ ಪ್ರೇರಿತರಾಗಿ ತಮ್ಮ ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ನಟ ಅಮೀರ್ ಖಾನ್ ಅವರ ವಕ್ತಾರರ ಮೂಲಗಳಿಂದ ತಿಳಿದುಬಂದಿದೆ. ಈ ಹಿಂದೆ ಅವರ ಸಂಪರ್ಕ ಹೊಂದಿರುವರು ಟೆಸ್ಟ್ ಮಾಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
