ಮಂಗಳೂರು (01-12-2020): ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಗುಚಿ 6 ಮಂದಿ ಮೀನುಗಾರರು ಮಂಗಳೂರಿನಲ್ಲಿ ನಾಪತ್ತೆಯಾಗಿದ್ದಾರೆ.
ದೋಣಿಯಲ್ಲಿ 20 ಕ್ಕೂ ಅಧಿಕ ಮೀನುಗಾರರಿದ್ದರು.ದುರಂತದಲ್ಲಿ 16 ಮಂದಿ ಪಾರಾಗಿದ್ದಾರೆ. ಸ್ಥಳಕ್ಕೆ ಕರಾವಳಿ ರಕ್ಷಣಾ ಪಡೆ ತಂಡ ಆಗಮಿಸಿ ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ.
ಬೋಳಾರದ ಶ್ರೀರಕ್ಷಾ ಎಂಬ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ದುರಂತ ನಡೆದಿದೆ.