ಕೋಲ್ಕತಾ(27-10-2020): ಪಶ್ಚಿಮ ಬಂಗಾಳದಲ್ಲಿ ದುರ್ಗಾ ವಿಗ್ರಹ ವಿಸರ್ಜಿಸುವ ವೇಳೆ ದೋಣಿ ನೀರಿನಲ್ಲಿ ಮುಳುಗಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ನಾಪತ್ತೆಯಾಗಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಬೆಲ್ಡಂಗಾ ನಿವಾಸಿಗಳಾದ ಸುಖೇಂಡು ಡೇ (21), ಪಿಕಾನ್ ಪಾಲ್ (23), ಅರಿಂದಂ ಬ್ಯಾನರ್ಜಿ (20) ಮತ್ತು ಸೋಮನಾಥ್ ಬ್ಯಾನರ್ಜಿ (22) ಎಂದು ಗುರುತಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಪೊಲೀಸರು ಮತ್ತು ರಕ್ಷಣಾ ತಂಡ ಶೋಧ ಕಾರ್ಯಾಚರಣೆ ಆರಂಭಿಸಿ ನಾಲ್ಕು ಶವಗಳನ್ನು ಹೊರತೆಗೆದಿದ್ದಾರೆ.
ದುರಂತಕ್ಕೆ ಕಾರಣವಾದ ಮುರ್ಷಿದಾಬಾದ್ನಲ್ಲಿ ವಿಗ್ರಹ ವಿಸರ್ಜನೆ ಮತ್ತು ಕಾರ್ಯಕ್ರಮದ ನಿರ್ವಹಣೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.