ಬಿಎಮ್‍ಟಿಸಿ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಿ ಸುತ್ತೋಲೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಬಿಎಮ್‍ಟಿಸಿ ಸಿಬ್ಬಂದಿಗಳು ಕಡ್ಡಾಯವಾಗಿ ಲಸಿಕೆ ಹಾಕಿಕೊಳ್ಳಬೇಕಿದೆ. ಬಳಿಕವೇ ಕರ್ತವ್ಯಕ್ಕೆ ಹಾಜರಾಗಲು ಅವಕಾಶವಿರುವುದು ಬಿಎಮ್‍ಟಿಸಿ ಸುತ್ತೋಲೆ ಹೊರಡಿಸಿದೆ.

ಸದ್ಯ ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಬಿಎಮ್‍ಟಿಸಿಯು ತನ್ನ ಸಂಚಾರವನ್ನು ಸ್ಥಗಿತಗೊಳಿಸಿದೆ. ಲಾಕ್ಡೌನ್ ಕೊನೆಗೊಂಡು ಬಸ್ಸುಗಳು ಸಂಚರಿಸಲು ಆರಂಭಿಸುವ ವೇಳೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಬೇಕಿದೆ. ಆದರೆ ಲಸಿಕೆ ತೆಗೆದುಕೊಳ್ಳದವರಿಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಜನರ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಕಾರಣದಿಂದಾಗಿ ಮುಂಜಾಗರೂಕತಾ ಕ್ರಮವಾಗಿ ಶರತ್ತನ್ನು ವಿಧಿಸಲಾಗಿದೆ.

ಲಾಕ್ಡೌನ್ ವೇಳೆ ಮನೆಯಲ್ಲೇ ಇದ್ದು, ಹತ್ತಿರದ ಆಸ್ಪತ್ರೆ ಅಥವಾ ಬಿಎಮ್‍ಟಿಸಿ ಡಿಪೋಗಳಿಗೆ ಹೋಗಿ ಲಸಿಕೆ ಹಾಕಿಕೊಳ್ಳಬೇಕಿದೆ. ಬಿಎಮ್‍ಟಿಸಿ ಡಿಪೋಗಳಲ್ಲೂ ಲಸಿಕೆ ಅಭಿಯಾನ ನಡೆಯುತ್ತಿದೆಯೆಂದು ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ. ನಿಗಮದ ಚಾಲಕರು, ನಿರ್ವಾಹಕರು, ಹಿನ್ನೆಲೆ ಚಾಲಕರು ಮತ್ತು ನಿರ್ವಾಹಕರು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಲಸಿಕೆ ಹಾಕಿಕೊಂಡು, ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಹಭಾಗಿಗಳಾಗಬೇಕಿದೆ ಎಂದು ಸೂಚಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು