ಪಡುಬಿದ್ರಿ ಬೀಚ್ ಗೆ ಅಂತಾರಾಷ್ಟ್ರೀಯ ಮಟ್ಟದ ಬ್ಲೂ ಫ್ಲ್ಯಾಗ್‌ ಮಾನ್ಯತೆ

blue flag
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಣಿಪಾಲ(11/10/2020): ಕರ್ನಾಟಕದ ಪಡುಬಿದ್ರಿ ಬೀಚ್ ಗೆ ಅಂತಾರಾಷ್ಟ್ರೀಯ ಮಟ್ಟದ, ಡೆನ್ಮಾರ್ಕ್ ನಲ್ಲಿರುವ “ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಷನ್ ” ಸಂಸ್ಥೆಯು  ಬ್ಲೂ ಫ್ಲ್ಯಾಗ್‌ ಮಾನ್ಯತೆಯ ಪ್ರಮಾಣಪತ್ರವನ್ನು ನೀಡಿದೆ.

ದೇಶದ ಒಟ್ಟು ಎಂಟು ಬೀಚ್ ಗಳಿಗೆ ಇಂದು ಬ್ಲೂ ಫ್ಲ್ಯಾಗ್ ಮಾನ್ಯತೆ ನೀಡಲಾಗಿದ್ದು,  ಶಿವರಾಜ್ ಪುರ್ (ಗುಜರಾತ್), ಘೋಗ್ಲಾ (ದಿಯು), ಕಾಸರಕೋಡ್ (ಕರ್ನಾಟಕ), ಕಪ್ಪಡ್( ಕೇರಳ) ಋಷಿಕೊಂಡ ( ಆಂಧ್ರಪ್ರದೇಶ), ಗೋಲ್ಡನ್ ( ಒಡಿಶಾ), ರಾಧಾನಗರ್ (ಅಂಡಾಮಾನ್) ಬ್ಲೂ ಫ್ಲ್ಯಾಗ್‌ ಮಾನ್ಯತೆ ಪಡೆದ ಇತರ ಬೀಚ್ ಗಳಾಗಿವೆ.

ಪರಿಸರಕ್ಕೆ ಹಾನಿಯಾಗದಂತೆ ಹಾಗೂ ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡುವಂತೆ  ಪ್ರವಾಸೋದ್ಯಮ ಸಂಬಂಧಿತ ಸೌಲಭ್ಯಗಳನ್ನು  ಕಲ್ಪಿಸಲಾಗಿರುವ ಬೀಚ್ ಗಳಿಗೆ ಆ ತೀರಗಳಿಗೆ “ಬ್ಲೂ ಫ್ಲಾಗ್‌’ ಮಾನ್ಯತೆ ನೀಡಲಾಗುತ್ತದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು