ತಮಿಳುನಾಡು(05-02-2021): ತಮಿಳುನಾಡಿನ ಜನರ ಗುಂಪೊಂದು ಅಂಧ ದಲಿತ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಥಳಿಸಿದೆ. ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಮಾನವೀಯ ಸಮಾಜವೇ ತಲೆತಗ್ಗಿಸುವಂತಾದೆ.
ಆರೋಪಿಗಳ ವಿರುದ್ಧ ಐಪಿಸಿ ಮತ್ತು ಎಸ್ಸಿ / ಎಸ್ಟಿ (ದೌರ್ಜನ್ಯ ತಡೆ ಕಾಯ್ದೆ) ಅಡಿಯಲ್ಲಿ ‘ಕೊಲೆ ಯತ್ನ’ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ ಎಂದು ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತನನ್ನು 20 ರ ಹರೆಯದ ರಾಹುಲ್ ಎಂದು ಗುರುತಿಸಲಾಗಿದೆ. ರಾಹುಲ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಹುಲ್ ಮೇಲೆ ಹಣ ಕಳ್ಳತನದ ಆರೋಪ ಹೊರಿಸಿ ಗುಂಪು ಹಲ್ಲೆ ನಡೆಸಿದೆ.
ದುಷ್ಕರ್ಮಿಗಳಲ್ಲಿ ಓರ್ವರು ಹಲ್ಲೆಯ ದೃಶ್ಯವನ್ನು ಸೆರೆಹಿಡಿದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ, ಯುವಕರ ಗುಂಪೊಂದು ಅಂಧ ಯುವಕನಿಗೆ ನಿರ್ಧಯವಾಗಿ ಥಳಿಸುತ್ತಿರುವುದು ಕಂಡುಬರುತ್ತದೆ, ಯುವಕ ಕಣ್ಣುಮುಚ್ಚಿ, ಕಿರುಚುತ್ತಿರುವುದು ಇಬ್ಬರು ಆತನನ್ನು ಹಿಡಿದುಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕಳೆದ 2 ವರ್ಷಗಳ ಮೊದಲು ಕೇರಳದಲ್ಲಿ ಬಿಕ್ಷುಕನೋರ್ವನನ್ನು ಗುಂಪೊಂದು ಕಳ್ಳತನದ ಆರೋಪವನ್ನು ಹೊರಿಸಿ ಕೊಲೆ ಮಾಡಿತ್ತು. ಮತ್ತೆ ಇಂತದ್ದೇ ಘಟನೆ ನಡೆದಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.