ಬಾಂಬು ಸ್ಪೋಟದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಸೇರಿ 15 ಮಂದಿ ಸಾವು

blast
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಾಬೂಲ್(04-10-2020): ಅಫ್ಘಾನಿಸ್ತಾನದಲ್ಲಿ ನಿನ್ನೆ ನಡೆದ ಬಾಂಬ್ ದಾಳಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಬಿಸ್ಮಿಲ್ಲಾ ಖಾನ್ ಶೆನ್ಸಾರಿ ಸೇರಿ 15 ಮಂದಿ ಮೃತಪಟ್ಟಿದ್ದಾರೆ.

ಪೂರ್ವ ಅಫಘಾನ್ ಪ್ರಾಂತ್ಯದ ನಂಗರ್‌ಹಾರ್‌ನಲ್ಲಿನ ಸರ್ಕಾರಿ ಕಟ್ಟಡವನ್ನು ಗುರಿಯಾಗಿಸಿಕೊಂಡು ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ನಂತರ ಹಲವಾರು ಸಶಸ್ತ್ರ ದಾಳಿಕೋರರು ಕಟ್ಟಡವನ್ನು ಪ್ರವೇಶಿಸಲು ಪ್ರಯತ್ನಿಸಿದರು ಆದರೆ ಭದ್ರತಾ ಪಡೆಗಳು ಅವರನ್ನು ಹತ್ಯೆ ಮಾಡಿದ್ದಾರೆಂದು ಎಂದು ರಾಜ್ಯಪಾಲರ ವಕ್ತಾರ ಅಟ್ಟೌಲ್ಲಾ ಖೋಗ್ಯಾನಿ ತಿಳಿಸಿದ್ದಾರೆ.

ಶೆನ್ಸಾರಿ ಅವರು 2018-19 ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ, ಶೆನ್ಸಾರಿ ಅವರು 6 ಏಕದಿನ ಮತ್ತು 6 ಟಿ-20 ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು