ಆಗ್ರಾ (18-10-2020): ಆಗ್ರಾದಲ್ಲಿ ಪಟಾಕಿ ದಾಸ್ತಾನು ತುಂಬಿದ ಗೋಡೌನ್ನಲ್ಲಿ ಭಾರಿ ಸ್ಫೋಟ ಸಂಭವಿಸಿ ಮೂವರು ಅಪರಿಚಿತ ವ್ಯಕ್ತಿಗಳು ಸಾವನ್ನಪ್ಪಿದ್ದು ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.
ಅವಶೇಷಗಳನ್ನು ತೆರವುಗೊಳಿಸಿದ ನಂತರ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಇಡೀ ಪ್ರದೇಶವು ಹೊಗೆ ಮತ್ತು ಗಬ್ಬು ಮೋಡದಿಂದ ಆವೃತವಾಗಿದೆ. ಎರಡು ಕಿಲೋಮೀಟರ್ ದೂರಕ್ಕೆ ಸ್ಫೋಟ ಕೇಳಿಬಂದಿದೆ.
ಪೃಥ್ವಿ ನಾಥ್ ಪೊಲೀಸ್ ಚೌಕಿಗೆ ಸಮೀಪವಿರುವ ಸನ್ಫ್ಲವರ್ ಶಾಲೆಯ ಸಮೀಪವಿರುವ ನ್ಯೂ ಅಜಮ್ ಪಾಡಾ ಗೊಡೌನ್ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಷಾ ಗಂಜ್ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.