ಕಾನ್ಪುರ(16-11-2020): ಉತ್ತರ ಪ್ರದೇಶದ ಗಟಂಪುರಿ ಎಂಬಲ್ಲಿ ವಾಮಾಚಾರ ನಡೆಸಿ, ಆರರ ಹಸುಳೆಯ ಬಲಿ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
Black magic claims 6-year-old girl's life in UP's Ghatampur; three detained: Police
— Press Trust of India (@PTI_News) November 15, 2020
ಶನಿವಾರ ಸಂಜೆ ದೀಪಾವಳಿಯ ಸಂಭ್ರಮಾಚರಣೆಯ ಸಿದ್ಧತೆಯಲ್ಲಿರುವಾಗ ಗಟಂಪುರಿ ನಿವಾಸಿ, ಕೃಷಿಕನಾಗಿರುವ ಕರಣ್ ಸಂಖ್ವರಿನ ಆರರ ಹರೆಯದ ಪುಟ್ಟ ಮಗು ಶ್ರೇಯಾ ನಾಪತ್ತೆಯಾಗಿತ್ತು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದರೂ ಪತ್ತೆಯಾಗಿರಲಿಲ್ಲ.
ಮರುದಿನ ಬೆಳಿಗ್ಗೆ ರಸ್ತೆ ಬದಿಯಲ್ಲಿ ಮಗುವಿನ ಮೃತದೇಹವನ್ನು ಗಮನಿಸಿದ ದಾರಿಹೋಕರು, ವಿಚಾರವನ್ನು ಪೋಲೀಸರಿಗೆ ಮುಟ್ಟಿಸಿದ್ದಾರೆ. ಮಗುವಿನ ಬಟ್ಟೆಬರೆ, ಚಪ್ಪಲಿ ಇತ್ಯಾದಿಗಳು ಹತ್ತಿರದ ಮರದಡಿಯಲ್ಲಿ ಬಿದ್ದಿದ್ದವು.
ಮೃತದೇಹದಲ್ಲಿ ಹರಿತವಾದ ಆಯುಧದಿಂದ ಮಾಡಲಾದ ಆಳವಾದ ಗಾಯದ ಗುರುತುಗಳು ಕಂಡು ಬಂದಿದ್ದು, ಹೆಚ್ಚಿನ ತನಿಖೆಗೆ ಪೋಸ್ಟ್-ಮಾರ್ಟಮಿಗೆ ಕಳುಹಿಸಲಾಗಿದೆ.