ನ್ಯೂಯಾರ್ಕ್ ಸಿಟಿ(11-12-2020): ಬ್ಲಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನಕಾರರಿಗೆ ಆಶ್ರಯ ಕೊಟ್ಟ ಭಾರತೀಯ-ಅಮೇರಿಕನ್ ದುಬೆಗೆ “ಹೀರೋಸ್ ಆಫ್ 2020” ಗೌರವ ದೊರೆತಿದೆ. ಟೈಮ್ ನಿಯತಕಾಲಿಕೆಯು ರಾಹುಲ್ ದುಬೆಗೆ ಈ ಗೌರವ ನೀಡಿರುವುದು.
ಜಾರ್ಜ್ ಫ್ಲಾಯ್ಡ್ ಹತ್ಯೆಯ ಬಳಿಕ ಪೋಲೀಸರ ವಿರುದ್ಧ ಮತ್ತು ವರ್ಣಬೇಧನೀತಿಯ ವಿರುದ್ಧ ಅಮೇರಿಕಾದ್ಯಂತ ಪ್ರತಿಭಟನೆಯ ಅಲೆಯು ಭುಗಿಲೆದ್ದಿತ್ತು. ಜೂನ್ ಒಂದರ ಸಂಜೆ ನಿಷೇಧಾಜ್ಞೆ ಜಾರಿಲ್ಲಿದ್ದಾಗ ಪ್ರತಿಭಟನಕಾರರನ್ನು ಚದುರಿಸಲು ಪೋಲೀಸರು ನಾನಾ ಬಗೆಯ ದೈಹಿಕ ದಂಡನೆಗಳನ್ನು ಪ್ರಯೋಗಿಸಿದ್ದರು. ಈ ವೇಳೆಯಲ್ಲಿ ರಾಹುಲ್ ದುಬೆಯು ತನ್ನ ಮನೆಯನ್ನು ಪ್ರವೇಶಿಸುವಂತೆ ಪ್ರತಿಭಟನಕಾರರಿಗೆ ಕೂಗಿ ಕರೆದನು.
ಪೋಲೀಸರ ವಿರೋಧವನ್ನೂ ಗಣನೆಗೆ ತೆಗೆದುಕೊಳ್ಳದೇ ಎಪ್ಪತ್ತಕ್ಕೂ ಹೆಚ್ಚು ಅಪರಿಚಿತ ಪ್ರತಿಭಟನಕಾರರಿಗೆ ಆಶ್ರಯ ನೀಡಿದ್ದರು. ದುಬೆಯು ತನ್ನ ಮನೆಯಲ್ಲಿ ಆಶ್ರಯ ಕೊಟ್ಟ ಕಾರಣದಿಂದ ಪೋಲೀಸರ ದಂಡನೆಗಳಿಂದ ಪಾರಾದವರು ದುಬೆಯ ಬಗ್ಗೆ ಹೊಗಳಿ ತಮ್ಮ ಟ್ಟಟರ್ ಖಾತೆಗಳಲ್ಲಿ ಬರೆದಿದ್ದರು.
ರಾಹುಲ್ ದುಬೆಯ ಹೊರತಾಗಿ ಅಗ್ನಿ ಶಾಮಕದಳ ಸಿಬ್ಬಂದಿ, ಪತ್ರಿಕಾ ವಿತರಕ, ಪಾಸ್ಟರ್, ಫುಡ್ ಸ್ಟಾಲ್ ಮಾಲಕ ಹೀಗೆ ಹಲವರು ಟೈಮ್ಸ್ ಮ್ಯಾಗಝೀನಿಂದ ಈ ವರ್ಷ ಸಮಾನ ಗೌರವಕ್ಕೆ ಪಾತ್ರರಾಗಿದ್ದಾರೆ.