ಬ್ಲಾಕ್ ಫಂಗಸ್: ಮಹಾರಾಷ್ಟ್ರದಲ್ಲಿ 52 ಸಾವು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ: ಕೋವಿಡ್ ಜೊತೆಗೇ ಗುರುತಿಸಿಕೊಂಡಿರುವಬ್ಲಾಕ್ ಫಂಗಸ್ಎಂಬ ರೋಗಕ್ಕೆ 52 ಮಂದಿ ಬಲಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಮುಕೋರ್ಮೈಕೋಸಿಸ್ (Mucormycosis) ಎಂಬುದೇ ವೈರಸಿನ ನಿಜವಾದ ಹೆಸರು.

ಕೋವಿಡ್ ಸಾಂಕ್ರಾಮಿಕ ರೋಗವು ಮಹಾರಾಷ್ಟ್ರದಲ್ಲಿ ಮೊದಲು ವರದಿಯಾದ ಬಳಿಕ ವರೆಗೆ ಒಟ್ಟು 1500 ಮಂದಿಯಲ್ಲಿ ಈ ರೋಗವು ಕಾಣಿಸಿಕೊಂಡಿದೆ. 52 ಜನರ ಪ್ರಾಣಕ್ಕೂ ಕುತ್ತು ತಂದಿದೆ.  ಬಲಿಯಾದ ಎಲ್ಲಾ 52 ಜನರೂ ಮೊದಲು ಕೋವಿಡ್ ತಗುಲಿ ಗುಣಮುಖರಾಗಿದ್ದವರು. ಆದರೆ ಬ್ಲಾಕ್ ಫಂಗಸಿಗೆ ಬಲಿಯಾದರು ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವಾಲಯವು ಪಿಟಿಐಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

ಬ್ಲಾಕ್ ಫಂಗಸ್ರೋಗಕ್ಕೆ ತುತ್ತಾದವರಲ್ಲಿ ತೀವ್ರ ತಲೆನೋವು, ದೃಷ್ಠಿದೋಷ, ಜ್ವರ, ಉಸಿರಾಟದ ತೊಂದರೆ, ಕಣ್ಣಿನ ಕೆಳಭಾಗದಲ್ಲಿ ನೋವು ಇತ್ಯಾದಿಗಳು ಕಂಡು ಬರುವುದು. ವೈರಸ್ ಬಾಧೆಯು ವಿರಳಾತಿವಿರಳ ಜನರಲ್ಲಿ ಕಂಡುಬರುವುದಾದರೂ ಕೂಡಾ ಇದೊಂದು ಪ್ರಾಣಾಪಾಯ ತರುವ ವೈರಸ್ ಎಂದು ತಜ್ಞರು ಹೇಳುತ್ತಾರೆ.

ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ, ಸಕ್ಕರೆ ಖಾಯಿಲೆ ಇರುವವರಲ್ಲಿ, ಸಕ್ಕರೆಯ ಅಂಶವನ್ನು ಜಾಸ್ತಿ ಸೇವಿಸುವವರಲ್ಲಿ ವೈರಸ್ ತೊಂದರೆ ಕೊಡುವ ಸಾಧ್ಯತೆ ಹೆಚ್ಚಿರುವುದೆಂದು ಹೇಳಿದ ತಜ್ಞರು, ನೈಸರ್ಗಿಕ ಹಣ್ಣುಗಳೂ ಸೇರಿದಂತೆ ಸಕ್ಕರೆಯ ಅಂಶವಿರುವ ತಿನಿಸುಗಳನ್ನು ಮಿತವಾಗಿಯೇ ಸೇವಿಸಬೇಕೆಂದು ಸಲಹೆ ನೀಡಿದ್ದಾರೆ. ಜೊತೆಗೆ ಕೋವಿಡ್ ರೋಗವು ಶರೀರದಲ್ಲಿನ ಸಕ್ಕರೆಯ ಪ್ರಮಾಣವನ್ನು ಏರುಪೇರು ಮಾಡುವುದು ಹಾಗೂ ಕೋವಿಡ್ ರೋಗ ಚಿಕಿತ್ಸೆಯಲ್ಲಿ ಸ್ಟಿರಾಯ್ಡ್ ಗುಳಿಗೆಗಳ ಅತಿಯಾದ ಬಳಕೆಯೂ ಬ್ಲಾಕ್ ಫಂಗಸ್ ಉದ್ಭವವಾಗಲು ಕಾರಣವಾಗಬಹುದೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮೂಗು ಮತ್ತು ಕಣ್ಣಿನ ಮೂಲಕವೂ ವೈರಸ್ ದೇಹವನ್ನು ಪ್ರವೇಶಿಸಬಹುದು. ಆಸ್ಪತ್ರೆಗಳಲ್ಲಿ ಬ್ಲಾಕ್ ಫಂಗಸ್ ರೋಗಿಗಳಿಗಾಗಿಯೇ ಪ್ರತ್ಯೇಕ ವಾರ್ಡ್ ನಿರ್ಮಿಸಬೇಕೆಂದು ಮಹಾರಾಷ್ಟ್ರ ಸರಕಾರವು ತೀರ್ಮಾನಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು