ಬ್ಲಾಕ್ ಫಂಗಸ್ ಬರಲು ಕೊಳಕು ಮಾಸ್ಕ್ ಕೂಡಾ ಕಾರಣವೇ!? ಏಮ್ಸ್ ವೈದ್ಯರು ಏನು ಹೇಳುತ್ತಾರೆ?

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ವೈದ್ಯಕೀಯ ತಜ್ಞರ ಪ್ರಕಾರ ಬ್ಲಾಕ್ ಫಂಗಸ್ ಸೋಂಕು ಹಿಂದಿನಿಂದಲೂ ಅಸ್ತಿತ್ವದಲ್ಲಿತ್ತು. ಮುಕ್ರೋಮಿಕೋಸಿಸ್ (Mucormycosis) ಎಂಬುದೇ ವೈರಸಿನ ನಿಜವಾದ ಹೆಸರು. ಆದರೆ ಕೋವಿಡ್ ಸಮಯದಲ್ಲಿ ಇದು ಹೆಚ್ಚಾಗಿ ಕೇಳಿ ಬರಲು ಕಾರಣವೇನು?

ಏಮ್ಸ್ ನ್ಯೂರೋಸರ್ಜನ್ ವೈದ್ಯರ ವಿಶ್ಲೇಷಣೆಯಂತೆ ಅಸಮರ್ಪಕ, ಅಸ್ವಚ್ಛ ಮಾಸ್ಕ್ ಬಳಕೆಯೂ ಬ್ಲಾಕ್ ಫಂಗಸಿಗೆ ಕಾರಣವಾಗಬಲ್ಲದು. ಅಂದರೆ ಸುಧೀರ್ಘ ಅವಧಿಯ ವರೆಗೆ ಒಂದೇ ಮಾಸ್ಕನ್ನು ಬಳಸುವುದರಿಂದಲೂ ಬ್ಲಾಕ್ ಫಂಗಸ್ ಉಂಟಾಗುವ ಸಾಧ್ಯತೆಯಿದೆಯಂತೆ!

ಸತತವಾಗಿ ಎರಡುಮೂರು ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದ ಬ್ಲಾಕ್ ಫಂಗಸ್ ಸುಲಭವಾಗಿ ಬೆಳೆಯುವ ಸಾಧ್ಯತೆಯಿದೆ. ಇದನ್ನು ತಪ್ಪಿಸಲು ಸ್ವಚ್ಛತೆಗೆ ಆದ್ಯತೆ ಕೊಟ್ಟು, ಸ್ವಯಂ ನಿಗಾ ವಹಿಸಬೇಕೆಂದು ಡಾ. ಸರಾಟ್ಚಂದ್ರ ಹೇಳುತ್ತಾರೆ.

ಅದೇ ರೀತಿ ಅನಿಯಂತ್ರಿತ ಮಧುಮೇಹ ಇರುವವರು, ಸ್ಟಿರಾಯ್ಡ್ ಗುಳಿಗೆಗಳನ್ನು ಅತಿಯಾಗಿ ಬಳಸಿದವರು, ಮೆಡಿಕಲ್ ಆಕ್ಸಿಜನ್ ಬಳಸಿದವರು, ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದವರು, ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು ಮುಂತಾದವರಲ್ಲಿ ಬ್ಲಾಕ್ ಫಂಗಸಿಗೆ ತುತ್ತಾಗುವ ಅಪಾಯವಿದೆ. ಇಂಥವರು ಗರಿಷ್ಠ ಜಾಗೃತೆ ವಹಿಸಬೇಕೆಂದು ತಜ್ಞರು ಎಚ್ಚರಿಸಿದ್ದಾರೆ.

ಬ್ಲಾಕ್ ಫಂಗಸ್ರೋಗಕ್ಕೆ ತುತ್ತಾದವರಲ್ಲಿ ತೀವ್ರ ತಲೆನೋವು, ದೃಷ್ಠಿದೋಷ, ಜ್ವರ, ಉಸಿರಾಟದ ತೊಂದರೆ, ಕಣ್ಣಿನ ಕೆಳಭಾಗದಲ್ಲಿ ನೋವು ಇತ್ಯಾದಿಗಳು ಕಂಡು ಬರುವುದು. ವೈರಸ್ ಬಾಧೆಯು ವಿರಳಾತಿವಿರಳ ಜನರಲ್ಲಿ ಕಂಡುಬರುವುದಾದರೂ ಕೂಡಾ ಇದೊಂದು ಪ್ರಾಣಾಪಾಯ ತರುವ ವೈರಸ್ ಎಂದು ತಜ್ಞರು ಹೇಳುತ್ತಾರೆ. ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ದೇಶಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಜನರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು