ಈ ಗ್ರಾಮಗಳಲ್ಲಿ ಬಿಜೆಪಿ ನಾಯಕರಿಗೆ ಪ್ರವೇಶ ನಿಷೇಧ; ಕೃಷಿ ಮಸೂದೆಗೆ ಪ್ರತಿಭಟನೆ

bjp
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಂಡೀಗಡ(09/10/2020): ಹರ್ಯಾಣದ ಮೂರು ಗ್ರಾಮಗಳಲ್ಲಿ ಬಿಜೆಪಿ ಹಾಗೂ ಜೆಜೆಪಿ ನಾಯಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ಕೇಂದ್ರ ಸರಕಾರದ ವಿವಾದಿತ ಕೃಷಿ ಮಸೂದೆಗೆ ವಿರೋಧಿಸಿ ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ತಮ್ಮ ಗ್ರಾಮಗಳಿಗೆ ಕಾಲೂರಬಾರದೆಂದು ಕಟ್ಟಪ್ಪಣೆ ವಿಧಿಸಿದ್ದಾರೆ.

ಗ್ರಾಮದ ಪ್ರವೇಶದ ದ್ವಾರದಲ್ಲಿ ಈ ಬಗ್ಗೆ ಹಾಕಿರುವ ಬೋರ್ಡ್ ಈಗ ವೈರಲ್ ಆಗಿದೆ.

ಹರ್ಯಾಣದ ಫತೇಬಾದ್ ಜಿಲ್ಲೆ ಹಾಗೂ ಅಂಬಲಾ ಜಿಲ್ಲೆಯ ಮೂರು ಗ್ರಾಮಗಳು ಗ್ರಾಮ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ. ವಿವಾದಿತ ಕೃಷಿ ಮಸೂದೆಯನ್ನು ಹಿಂಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಗ್ರಾಮದ ರೈತರು ಹೇಳಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು