ಬಿಜೆಪಿಯವರಿಗೆ ಜನರು ಬೀದಿ ಬೀದಿಯಲ್ಲಿ ಕಲ್ಲು ಹೊಡೆಯುವ ಪರಿಸ್ಥಿತಿ ಬರಲಿದೆ : ಶಾಸಕಿ ಲಕ್ಷ್ಮಿ ಹೆಬ್ಬಾಳಕರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಳಗಾವಿ: ಬಿಜೆಪಿಯರಿಗೆ ಜನರು ಬೀದಿ ಬೀದಿಯಲ್ಲಿ ಕಲ್ಲು ಹೊಡೆಯುವ ಪರಿಸ್ಥಿತಿ ಬರಲಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಭವಿಷ್ಯ ನುಡಿದಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಶಾಸಕಿ ಮತ್ತು  ಕೆಪಿಸಿಸಿ ವಕ್ತಾರೆ ಲಕ್ಷ್ಮೀ ಹೆಬ್ಬಾಳಕರ, “ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಕೊರೋನಾ ವಿಚಾರದಲ್ಲಿ ಸಂಪೂರ್ಣವಾಗಿ ಎಡವಿದೆ. ರೋಗದ ನಿಯಂತ್ರಣ ಮಾಡುವಲ್ಲೂಪ್ಯಾಕೇಜ್ ಘೋಷಣೆ ವಿಚಾರದಲ್ಲೂ ದಾರಿ ತಪ್ಪಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅವರಿಗೆ ಜನ ಬೀದಿ ಬೀದಿಯಲ್ಲೂ ಕಲ್ಲು ಹೊಡೆಯುವ ಪರಿಸ್ಥಿತಿ ಬರಲಿದೆ.” ಎಂದಿದ್ದಾರೆ.

ಗಂಗಾನದಿ ಸ್ವಚ್ಛ ಮಾಡುತ್ತೇವೆ ಎಂದಿದ್ದರು. ಈಗ ಅದರಲ್ಲಿ ಶವಗಳು ತೇಲಿ ಬರುತ್ತಿವೆ. ಕೋವಿಡಿನಿಂದಾಗಿ ಮೃತಪಟ್ಟವರ ಲೆಕ್ಕವನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗುತ್ತಿದೆ. ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲಿ ಹೆಚ್ಚು ಲಸಿಕೆಗಳನ್ನು ನೀಡಿ ಪಕ್ಷಪಾತ ಮಾಡಲಾಗುತ್ತಿದೆ. ಇದೀಗ ಗುಜರಾತಿಗೆ ಚಂಡಮಾರುತದ ಹಿನ್ನೆಲೆಯಲ್ಲಿ ಸಾವಿರ ಕೋಟಿ ಆರ್ಥಿಕ ಪ್ಯಾಕೇಜ್ ನೀಡಿದರು. ಕರ್ನಾಟಕಕ್ಕೆ ಏನೂ ಇಲ್ಲ. ಮೊದಲ ನೆರೆ ಪರಿಹಾರನ್ನೇ ಕರ್ನಾಟಕಕ್ಕೆ ಕೊಟ್ಟಿರಲಿಲ್ಲ. ಆಮ್ಲಜನಕ ಕೊಡಲೂ ಹೈಕೋರ್ಟ್ ಆದೇಶ ನೀಡಬೇಕಾದ ಪರಿಸ್ಥಿತಿ ಬಂದಿದೆ.” ಎಂದೆಲ್ಲಾ ವಾಗ್ದಾಳಿ ನಡೆಸಿದರು.

ರೈತರಿಗೆ ಹತ್ತು ಲಕ್ಷ ರೂಪಾಯಿಗಳ ಬಡ್ಡಿ ರಹಿತ ಸಾಲ ನೀಡಬೇಕು. ನೇಕಾರರು ಸೇರಿದಂತೆ ಹಲವು ವರ್ಗಗಳನ್ನು ಆರ್ಥಿಕ ಪ್ಯಾಕೇಜಿನಿಂದ ಹೊರಗಿಟ್ಟಿದೆ. ಅವರನ್ನು ಸೇರಿಸಬೇಕು. ಲಾಕ್ಡೌನ್ ಮಾಡುವುದಾದರೆ, ಸೂಕ್ತ ಪರಿಹಾರ ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸರಕಾರಕ್ಕೆ ತಾಕೀತು ಮಾಡಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು