ಬಿಜೆಪಿ ಕಾರ್ಯಕರ್ತನ ಇರಿದು ಕೊಲೆ

bjp worker
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(12-02-2021): ದೆಹಲಿಯ ಮಂಗೋಲ್ಪುರಿ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಇರಿದು ಕೊಲೆ ಮಾಡಲಾಗಿದೆ.

ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನಡೆದ ತೀವ್ರ ವಾಗ್ಧಾಳಿ ಬಳಿಕ ರಿಂಕು ಶರ್ಮಾನನ್ನು ಕೊಲೆ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ನಡೆದ ವಾಗ್ವಾದದ ಬಳಿಕ ರಿಂಕು- ಡ್ಯಾನಿಶ್ ಎಂಬಾತನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ಡ್ಯಾನಿಶ್ ಗೆಳೆಯರು ರಿಂಕುಗೆ ಚೂರಿಯಲ್ಲಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ರಿಂಕು ಮತ್ತು ಡ್ಯಾನಿಶ್ ನೆರೆಹೊರೆಯವರು, ಒಬ್ಬರಿಗೊಬ್ಬರು ತಿಳಿದಿದ್ದರು ಎಂದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ ಮತ್ತು ಅವರಲ್ಲಿ ಯಾರೊಬ್ಬರೂ ಈ ಹಿಂದೆ ಯಾವುದೇ ಕ್ರಿಮಿನಲ್ ದಾಖಲೆಗಳನ್ನು ಹೊಂದಿಲ್ಲ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಸುಧಾಂಶು ಧಮಾ ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು