ಮುಂದೆ ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಮಸೀದಿ ಕೆಡವುತ್ತಾರೆ, ಬುರ್ಖಾ ನಿಷೇಧಿಸುತ್ತಾರೆ-ಸಂಸದ ಬದ್ರುದ್ದೀನ್ ಬೆಚ್ಚಿಬೀಳಿಸುವ ಹೇಳಿಕೆ!

badruddin
Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಸ್ಸಾಂ(22-01 -2021): ಮುಂದಿನ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಜೆಪಿಗರು ಮಸೀದಿಗಳನ್ನು ಕೆಡವುತ್ತಾರೆ.ಮುಸ್ಲಿಮರ ಮೇಲೆ ಹಲವಾರು ನಿರ್ಬಂಧಗಳನ್ನು ಹೇರುತ್ತಾರೆ ಎಂದು ಧುಬ್ರಿ ಲೋಕಸಭಾ ಸಂಸದ ಬದ್ರುದ್ದೀನ್ ಹೇಳಿದ್ದಾರೆ.

 ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಒಕ್ಕೂಟವನ್ನು ಸೋಲಿಸಲು ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಬದ್ರುದ್ದೀನ್ ಅಜ್ಮಲ್ ನೇತೃತ್ವದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ನೊಂದಿಗೆ ಮೈತ್ರಿ ಮಾಡಿಕೊಂಡ ಒಂದು ದಿನದ ನಂತರ ಬದ್ರುದ್ದೀನ್ ಈ ಹೇಳಿಕೆಯನ್ನು ನೀಡಿದ್ದಾರೆ.

ಅಸ್ಸಾಂನಲ್ಲಿ ಆಡಳಿತರೂಢ ಬಿಜೆಪಿ ಪಕ್ಷದ ಮೇಲೆ ದಾಳಿ ಮಾಡಿದ ಬದ್ರುದ್ದೀನ್, ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಧರಿಸಿ ಹೊರಬರಲು, ಮುಸ್ಲಿಂ ಪುರುಷರಿಗೆ ಗಡ್ಡ ಬೆಳೆಸಲು, ತಲೆಬುರುಡೆಗೆ ಟೋಪಿ ಧರಿಸಲು ಅಥವಾ ಮಸೀದಿಗಳಲ್ಲಿ ‘ಅಜಾನ್’ ನೀಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅವರು ರ್ಯಾಲಿಯಲ್ಲಿ ಜಮಾಯಿಸಿದ್ದ ಸಭಿಕರನ್ನು ಉದ್ದೇಶಿಸಿ, ನೀವು ಈ ರೀತಿ ಬದುಕಲು ಸಾಧ್ಯವಾ? ಎಂದು ಪ್ರಶ್ನಿಸಿದ್ದಾರೆ.

 

 

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು