ಬಂಗಾಳದಲ್ಲಿ ಘರ್ ವಾಪ್ಸಿ: ಬಿಜೆಪಿ ಉಪಾಧ್ಯಕ್ಷ ಮುಕುಲ್ ರಾಯ್ ಟಿಎಂಸಿಗೆ ಸೇರ್ಪಡೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಲ್ಕತ್ತಾ: ಟಿಎಂಸಿ ಪಕ್ಷ ತೊರೆದು ಬಿಜೆಪಿಗೆ ಸೇರಿದವರಲ್ಲಿ ಮೊದಲಿಗರಾಗಿರುವ ಬಂಗಾಳದ ರಾಜಕಾರಣಿ ಮುಕುಲ್ ರಾಯ್ ಅವರು ಮತ್ತೆ ಇಂದು ತೃಣಮೂಲ ಕಾಂಗ್ರೆಸ್​ಗೆ ಮರಳಿದ್ದಾರೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಟಿಎಂಸಿ ಭವನದಲ್ಲಿ ರಾಯ್ ಅವರು ಟಿಎಂಸಿಗೆ ಸೇರ್ಪಡೆ ಆಗಿದ್ದಾರೆ. ಇದಕ್ಕಿಂತ ಮುನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ರಾಯ್ ಮಾತುಕತೆ ನಡೆಸಿದ್ದಾರೆ. ಈ ಹೊತ್ತಲ್ಲಿ ಪಾರ್ಥ ಚಟರ್ಜಿ ಕೂಡಾ ಭಾಗಿಯಾಗಿದ್ದರು. ಮುಕುಲ್ ರಾಯ್ ಅವರ ‘ಘರ್ ವಾಪ್ಸಿ’ ಅಥವಾ ಮರಳುವಿಕೆಯು ಬಂಗಾಳ ರಾಜಕೀಯ ವಲಯದಲ್ಲಿ ಕಳೆದ ಒಂದು ವಾರದಿಂದ ಚರ್ಚಾ ವಿಷಯ ಆಗಿತ್ತು. ಬಿಜೆಪಿಯನ್ನು ಸೋಲಿಸಿ ಬಹುಮತದೊಂದಿಗೆ ಮಮತಾ ಬ್ಯಾನರ್ಜಿ ಅಧಿಕಾರ ಹಿಡಿದ ನಂತರ ಮುಕುಲ್ ರಾಯ್ ಮತ್ತೆ ಟಿಎಂಸಿಗೆ ಮರಳಲಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು.

ಬಿಜೆಪಿಯಲ್ಲಿ ತುಂಬಾ ಶೋಷಣೆ ಇದೆ, ಬಿಜೆಪಿಯಲ್ಲಿ ಯಾರೂ ಇರಲು ಬಯಸುವುದಿಲ್ಲ, ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ಧ ಒಂದೇ ಒಂದು ಶಬ್ದವೂ ಮಾತಾಡಲಿಲ್ಲ, ಬಿಜೆಪಿ ಬಿಟ್ಟು ಇನ್ನೂ ಹಲವು ನಾಯಕರು ವಾಪಸ್ ಬರುತ್ತಾರೆ, ಈಗ ಮುಕುಲ್ ರಾಯ್ ಬಂದಿದ್ದಾರೆ, ಅವರು ನಮ್ಮ ಮನೆಯ ಸದಸ್ಯ, ಹೀಗಾಗಿ ಪುನಃ ಮರಳಿದ್ದಾರೆ, ಅವರಿಗೆ ಅಭಿನಂದನೆಗಳು ಸಲ್ಲಿಸುವೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಮುಕುಲ್ ರಾಯ್ ಅವರು ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದವರು, ನಂತರ ಬಿಜೆಪಿ ಪಕ್ಷ ಸೇರಿದರು, 2020 ರಲ್ಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ ಮುಕುಲ್ ರಾಯ್ ಟಿಎಂಸಿ ಪಕ್ಷದ ಮಗನಾಗಿ ಮತ್ತೆ ಪಕ್ಷ ಸೇರುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಪಕ್ಷದ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಅವರು ಪಕ್ಷ ಬಿಟ್ಟು ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆ ಆಗಿರುವುದು ಬಿಜೆಪಿಗೆ ಹಿನ್ನಡೆಯಾಗಿದೆ, ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ಮೋದಿ ಇವರಿಬ್ಬರ ನಡುವೆ ನಡೆಯುತ್ತಿರುವ ತೀವ್ರ ರಾಜಕೀಯ ವರ್ಚಸ್ಸಿನ ನಡುವೆ ಇದೊಂದು ಮಮತಾ ಬ್ಯಾನರ್ಜಿ ಗೆ ಪ್ಲಸ್ ಎನಿಸದೇ ಇರದು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲು ಟಿಎಂಸಿ ಅಧಿಕಾರ ಗದ್ದುಗೆ ಹಿಡಿದ ನಂತರ ಇಂಥ ಹಲವು ಬೆಳವಣಿಗೆಗಳು ನಡೆಯುತ್ತಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು