ಬೆಂಗಳೂರು(26/10/2020);ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಾಮಲಿಂಗ ರೆಡ್ಡಿ ಹಾಗೂ ಪುತ್ರಿ ಸೌಮ್ಯ ರೆಡ್ಡಿ ಮೂರು ಧರ್ಮಗಳ ಧಾರ್ಮಿಕ ಪವಿತ್ರ ಚಿತ್ರ ಇಟ್ಟು ಪೂಜಿಸಿರುವುದನ್ನು ಬಿಜೆಪಿ ಪ್ರಶ್ನಿಸಿದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ನಾಯಕಿ ಮಾಳವಿಕ ಅವಿನಾಶ್, `ಮುಂದಿನ ಕ್ರಿಸ್ಮಸ್ ಗೆ ವಿಷ್ಣು ಸಹಸ್ರನಾಮ ಹಾಗೂ ಈದ್ ಗೆ ಗಣ ಹೋಮ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಜಯನಗರದಲ್ಲಿರುವ ಶಾಸಕರ ಕಛೇರಿಯಲ್ಲಿ ಅವರು ಆಯುಧ ಪೂಜೆಯ ಜೊತೆಗೆ ಸಂವಿಧಾನ ಗ್ರಂಥಕ್ಕೂ ಪೂಜೆ ಸಲ್ಲಿಸಿದ್ದಾರೆ.