ಬಿಜೆಪಿ ಪಕ್ಷದವರಿಗೆ ಆಡಳಿತ ನಡೆಸುವುದು ಗೊತ್ತಿಲ್ಲ : ಡಿ.ಕೆ.ಶಿವಕುಮಾರ್ ಆಕ್ರೋಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಬಿಜೆಪಿ ಪಕ್ಷದವರಿಗೆ ಆಡಳಿತ ನಡೆಸುವುದು ಗೊತ್ತಿಲ್ಲ, ಹಾಗಾಗಿ ರಾಜ್ಯದಲ್ಲಿ ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತಿದೆ. ಸರ್ಕಾರವೇ ಜನರಿಗೆ ಈ ಖಾಯಿಲೆ ಅಂಟಿಸಿರುವುದರಿಂದ ಜನರ ಕಾಳಜಿ ವಹಿಸುವುದೂ ಸರ್ಕಾರದ ಹೊಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಸರ್ಕಾರದ ಯಾವ ಸಚಿವರು ಇಲ್ಲಿಯವರೆಗೂ ಯಾವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ? ಕೋವಿಡ್‌ಗೆ ಸಂಬಂಧಿಸಿದಂತೆ ಯಾವ ಆಸ್ಪತ್ರೆಯಲ್ಲಿ ಸಭೆ ನಡೆಸಿದ್ದಾರೆ? ಯಾವ ರೋಗಿಯ ಜೊತೆಗೆ ಮಾತನಾಡಿದ್ದಾರೆ, ಅವರ ಕಷ್ಟ ನೋಡಿದ್ದಾರೆ? ಆಸ್ಪತ್ರೆಯಲ್ಲಿ ಏನು ಸೌಲಭ್ಯ ಇದೆ ಎಂದು ಇವರು ನೋಡಿದ್ದಾರಾ? ಇಲ್ಲ ಎಂದ ಮೇಲೆ ಈ ಸರ್ಕಾರ ಏಕಿರಬೇಕು? ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಅಧಿಕಾರಿಗಳನ್ನು ಕೋವಿಡ್ ನಿರ್ವಹಣೆಯ ಕೆಲಸಕ್ಕಾಗಿ ಬಳಸಿಕೊಳ್ಳಲಿ. ರಾಜ್ಯದ 200 ಐಎಎಸ್ ಹಾಗೂ 400 ಕೆಎಎಸ್ ಅಧಿಕಾರಿಗಳಿಗೆ ಜವಾಬ್ದಾರಿ ಒದಗಿಸಬಹುದು ಅಲ್ಲವೇ, ಇದೆಲ್ಲಾ ಮಾಡದ ಬಿಜೆಪಿ ಸರ್ಕಾರ ಜನರ ಜೀವದ ಜೊತೆಗೆ ಚಲ್ಲಾಟವಾಡುತ್ತಿದೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಿಜೆಪಿ ಸಚಿವರ ಬಗ್ಗೆ ಜನರಿಗೆ ಅಸಹ್ಯವಿದೆ. ಆ ಕಾರಣಕ್ಕೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಹೇಳಿಕೆ ಕೊಡಿಸುತ್ತಿದ್ದಾರೆ. ಇಷ್ಟು ದಿನ ಸಚಿವರೇ ಹೇಳುತ್ತಿದ್ದರು, ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕವಾದರೂ ಹೇಳಬಹುದಿತ್ತಲ್ಲವೇ? ಸರ್ಕಾರ ಎಲ್ಲದರಲ್ಲೂ ಸಂಪೂರ್ಣ ವಿಫಲಾಗಿರುವುದಕ್ಕೆ ಇದು ಸಾಕ್ಷಿ ಎಂದು ಡಿಕೆಶಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು