ಬೆಳಗಾವಿ: ಕರಾವಳಿ ಕಾಲೇಜುಗಳಲ್ಲಿ ಆರಂಭವಾಗಿರುವ ಹಿಜಾಬ್-ಕೇಸರಿ ಶಾಲು ವಿವಾದ ಇದೀಗ ಬೆಳಗಾವಿ ಜಿಲ್ಲೆಯ ಕಾಲೇಜೊಂದಕ್ಕೆ ವ್ಯಾಪಿಸಿದೆ.
ರಾಮದುರ್ಗ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದು ವಸ್ತ್ರಸಂಹಿತೆ ಸಂಘರ್ಷ ಆರಂಭಿಸಲು ಯತ್ನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ್ದಾರೆ. ವಿದ್ಯಾರ್ಥಿಗಳು ಧರಿಸಿದ್ದ ಕೇಸರಿ ಶಾಲು ತೆಗೆಸಿ, ಇಂತಹ ಸಂಘರ್ಷಗಳಿಗೆ ಕಾರಣವಾಗದಂತೆ ತಿಳಿ ಹೇಳಿದ್ದಾರೆ.
ಇನ್ನು ಉಡುಪಿ- ಕುಂದಾಪುರದಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣಕ್ಕೆ ಕೇಸರಿ ಶಾಲನ್ನು ಹಾಕಿಕೊಂಡು ತೆರಳಿದ್ದಾರೆ. ಬುರ್ಖಾ ಹಾಕಿದ ವಿದ್ಯಾರ್ಥಿಗಳನ್ನು ಗೇಟ್ ಬಳಿಯೇ ಶಿಕ್ಷಕರು ತಡೆದಿದ್ದಾರೆ. ಘಟನೆಯ ಬೆನ್ನಲ್ಲೇ ಕರಾವಳಿಯ ಕೆಲ ಜನರು ಬಿಜೆಪಿಪರ ಸಂಘಟನೆಗಳನ್ನು ಟೀಕಿಸುತ್ತಿದ್ದಾರೆ.
