‘ಕರೋನಾ ಮುಕ್ತ ಕರ್ನಾಟಕ’ ಬದಲು ಬಿಜೆಪಿ ಮುಕ್ತ ಬಿಜೆಪಿ ಮಾಡುವುದು ರಾಜ್ಯ ಬಿಜೆಪಿಯ ಆದ್ಯತೆಯಾಗಿದೆ: ರಾಜ್ಯ ಕಾಂಗ್ರೆಸ್ ಆರೋಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: “ಕರೋನಾ ಮುಕ್ತ ಕರ್ನಾಟಕ” ಮಾಡುವುದು ಈಗಿನ ತುರ್ತು ಆದ್ಯತೆಯಾಗಬೇಕಿತ್ತು. ಬಿಜೆಪಿ ಮುಕ್ತ ಬಿಜೆಪಿ ಮಾಡುವುದು ರಾಜ್ಯ ಬಿಜೆಪಿಯ ಆದ್ಯತೆಯಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್
ರಾಜ್ಯದಲ್ಲಿ ಹತ್ತಾರು ಸೋಂಕುಗಳು ಕಾಣಿಸಿಕೊಂಡಿವೆ, ಜನತೆ ನರಳುತ್ತಿದ್ದಾರೆ, ವೈದ್ಯಕೀಯ ಸೌಲಭ್ಯಗಳಿಗೆ ಪರದಾಡುತ್ತಿದ್ದಾರೆ. ಇದೆಲ್ಲವನ್ನೂ ಮರೆತ ಬಿಜೆಪಿ ರಾಜಕೀಯದ ಆಟ ಆಡುತ್ತಿದೆ. 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ದೆಹಲಿಗೆ ತೆರಳಿದ್ದು. ಆಕ್ಸಿಜನ್ ತರಲು ಅಲ್ಲ.
ಕೇಂದ್ರದ ಅನ್ಯಾಯ ಪ್ರಶ್ನಿಸಲು ಅಲ್ಲ, ಅಂಪೊಟರಿಸನ್ ಔಷಧ ತರಲಲ್ಲ. ಲಸಿಕೆ ಹಂಚಿಕೆ ತಾರತಮ್ಯ ಪ್ರಶ್ನಿಸಲಲ್ಲ.
ರಾಜ್ಯದ ಜನತೆಗೆ ಲಸಿಕೆ ತರಲಲ್ಲ ಎಂದು ಆರೋಪಿಸಿದೆ.

ಹೋಗಿದ್ದು ಕುರ್ಚಿ ಗುದ್ದಾಟಕ್ಕೆ!
ದುರಿತ ಕಾಲದಲ್ಲೂ ರಾಜಕೀಯ ಮಾಡುತ್ತಿರುವ ರಾಜ್ಯ ಬಿಜೆಪಿಗೆ ಲಜ್ಜೆ ಎಂಬುದೇ ಇಲ್ಲ, ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಉಲ್ಬಣಿಸುತ್ತಿರುವ ಶಿಲೀಂದ್ರ ರೋಗದ ಬಗ್ಗೆ ಚರ್ಚಿಸಲಲ್ಲ, ಜನತೆಗೆ ಆರ್ಥಿಕ ನೆರವು ನೀಡುವುದಕ್ಕಲ್ಲ. ಕೇಂದ್ರದ ಅನ್ಯಾಯ ಪ್ರಶ್ನಿಸಲಲ್ಲ, ಕರೋನಾ ನಿಯಂತ್ರಣದ ಬಗ್ಗೆಚರ್ಚಿಸಲಲ್ಲ ಬದಲಾಗಿ #BSYmuktaBJP ಮಾಡಲು! ಇಂತಹ ಅಯೋಗ್ಯ ಪಕ್ಷ ಅಧಿಕಾರದಲ್ಲಿರುವುದು ರಾಜ್ಯದ ದುರ್ದೈವ
ಎಂದು ಕಾಂಗ್ರೆಸ್ ಹೇಳಿದೆ.

ಕರ್ನಾಟಕ ಬಿಜೆಪಿ ಪಕ್ಷ ಮಾಡುತ್ತಿರುವ ಚಟುವಟಿಕೆ ಎರಡೇ! ಒಂದು “ಮಾನವ ಮುಕ್ತ ಕರ್ನಾಟಕ”
ಮತ್ತೊಂದು “ಯಡಿಯೂರಪ್ಪ ಮುಕ್ತ ಬಿಜೆಪಿ”!
ಇವೆರಡರ ಹೊರತಾಗಿ ಬಿಜೆಪಿ ಚಿಂತಿಸುತ್ತಲೇ ಇಲ್ಲ. ಜನರ ಜೀವ ಉಳಿಸುವ ಗಾಂಭೀರ್ಯತೆ ಇಲ್ಲವೇ ಇಲ್ಲ.

ಬಿಜೆಪಿ ಆಡಳಿತಕ್ಕೆ ಬಂದಾಗಲೆಲ್ಲ ಜನಪರ ಕೆಲಸ, ಯೋಜನೆಗಳ ಬದಲಿಗೆ  ರೆಸಾರ್ಟ್ ರಾಜಕೀಯ, ಆಂತರಿಕ ಕಿತ್ತಾಟ, ಕುರ್ಚಿ ಕದನಗಳೇ ಸದ್ದು ಮಾಡುತ್ತವೆ. ಹಿಂದೆ 3 ಸಿಎಂಗಳ ಬದಲಾವಣೆಯಾಗಿತ್ತು, ಈಗಲೂ ಅದೇ ದಿಕ್ಕಿನಲ್ಲಿ ಸಾಗುತ್ತಿದೆ ಬಿಜೆಪಿ. #BJPvsBJP ಕಿತ್ತಾಟ ಆಡಳಿತದ ಮೇಲೆ ದುಷ್ಪರಿಣಾಮ ಬೀರಿ ರಾಜ್ಯ ಇನ್ನಷ್ಟು ಅಧೋಗತಿಗೆ ಇಳಿಯಲಿದೆ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿಗೆ ತರಾಟೆಗೆ ತೆಗೆದುಕೊಂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು