ಬಿಜೆಪಿ ಮುಖಂಡನನ್ನು ಹನಿಟ್ರ್ಯಾಪಿಗೆ ಬೀಳಿಸುತ್ತಿದ್ದ ಕಾರ್ಯಕರ್ತ | ಐವರ ಬಂಧನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮೈಸೂರು (20-11-2020): ಹನಿಟ್ರ್ಯಾಪ್ ನಡೆಸುತ್ತಿದ್ದ ಐವರ ಬಂಧನವಾಗಿದೆ. ಇದರಲ್ಲಿ ಪಿರಿಯಾಪಟ್ಟಣದ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಯಾಗಿದ್ದ ನವೀನ್ ನೇರಳೆಕುಪ್ಪೆ ಕೂಡಾ ಸೇರಿದ್ದಾನೆ.

ಉಳಿದ ನಾಲ್ಕು ಮಂದಿಯನ್ನು ಶಿವರಾಜು, ಹರೀಶ್, ಅನಿತಾ, ವಿಜಿ ಎಂದು ತಿಳಿದುಬಂದಿದೆ. ಇವರು ಬಿಜೆಪಿಯ ಪಿರಿಯಾಪಟ್ಟಣ ಮಂಡಲದ ಅಧ್ಯಕ್ಷ ಡಾ.ಕೆ. ಪ್ರಕಾಶ್ ಬಾಬುರಾವನ್ನು ಹನಿಟ್ರ್ಯಾಪ್ ಬಲೆಗೆ ಸಿಲುಕಿಸಿದ್ದರು.

ಬೆಡ್ ರೂಮು ದೃಶ್ಯಗಳಿರುವ ವೀಡಿಯೋವನ್ನು ಬಳಸಿ, ಸುಮಾರು 31 ಲಕ್ಷ ರೂಪಾಯಿಗಳಿಗೂ ಹೆಚ್ಚು ಬೇಡಿಕೆ ಇಟ್ಟು, ವಸೂಲಿಯೂ ಮಾಡಿದ್ದರು. ಹೆಚ್ಚಿನ ಬೇಡಿಕೆ ಬಂದಾಗ, ಬಾಬು ರಾವ್ ಪೋಲೀಸರ ಮೊರೆ ಹೋಗಿದ್ದಾನೆ.

ಆರೋಪಿಗಳಿಗೆ ಹನಿಟ್ರ್ಯಾಪ್ ನಡೆಸುವ ದೊಡ್ಡ ಜಾಲವೇ ಇದ್ದು, ಅದು ಹಲವಾರು ಜಿಲ್ಲೆಗಳಿಗೂ ವ್ಯಾಪಿಸಿದೆಯೆಂದು ಸಂಶಯಿಸಲಾಗಿದೆ. ಉಳಿದವರನ್ನು ಕಂಡು ಹಿಡಿಯಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು