ಭೋಪಾಲ್(02-03-2021): ಬಿಜೆಪಿ ಸಂಸದ, ಮಧ್ಯಪ್ರದೇಶ ಬಿಜೆಪಿಯ ಮಾಜಿ ಅಧ್ಯಕ್ಷ ನಂದಕುಮಾರ್ ಸಿಂಗ್ ಚೌಹಾಣ್ ನಿಧನರಾಗಿದ್ದಾರೆ.
ದೆಹಲಿಯ ಗುರುಗಾಂವ್ ಮೇದಾಂತ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಖಾಂಡ್ವಾ ಕ್ಷೇತ್ರದ ಸಂಸದ ನಂದಕುಮಾರ್ ಸಿಂಗ್ ಮೃತಪಟ್ಟಿರುವ ಬಗ್ಗೆ ಅವರ ಪುತ್ರ ಹರ್ಷವರ್ಧನ್ ಚೌಹಾಣ್ ಮಾಹಿತಿ ನೀಡಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಚೌಹಾನ್ ಗಂಭೀರ ಸ್ಥಿತಿಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ, ಅವರಿಗೆ ಕೊರೊನಾ ಸೋಂಕು ಕೂಡ ತಗುಲಿತ್ತು. ಇದರಿಂದಾಗಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.