ಉಪಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಸಚಿವ ನೋಟು ಹಂಚುವ ವಿಡಿಯೋ ವೈರಲ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಭೋಪಾಲ್(06-10-2020): ಮಧ್ಯಪ್ರದೇಶದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿಸಾಹುಲಾಲ್ ಸಿಂಗ್ ಅವರು ನ.3ರ ಉಪಚುನಾವಣೆಯಲ್ಲಿ ಅನ್ನೂಪುರ ವಿಧಾನಸಭಾ ಸ್ಥಾನಕ್ಕೆ ಆಡಳಿತಾರೂ BJP ಬಿಜೆಪಿಯ ನಿರೀಕ್ಷಿತ ಅಭ್ಯರ್ಥಿಯಾಗಲಿದ್ದು,  ಅವರು ತಮ್ಮ ಕ್ಷೇತ್ರದ ಮಕ್ಕಳಿಗೆ ಹಣವನ್ನು ವಿತರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸುಮಾರು ಅರ್ಧ ನಿಮಿಷದ ವಿಡಿಯೋ ತುಣುಕಿನಲ್ಲಿ ಸಿಂಗ್ 100 ರೂ.ಗಳ ಕರೆನ್ಸಿ ನೋಟುಗಳನ್ನು ಹಿಡಿದುಕೊಂಡು ತನ್ನ ಕ್ಷೇತ್ರದ ಹೆಣ್ಣು ಮಕ್ಕಳಿಗೆ ಹಂಚಿಕೆ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದವರು ಬಿಜೆಪಿಯನ್ನು ಹೊಗಳಿ ಘೋಷಣೆಗಳನ್ನು ಕೂಗುತ್ತಿದ್ದರು. ಈ ಕುರಿತ ವಿಡಿಯೋ ವೈರಲ್ ಆಗಿದೆ. ಸಚಿವರು ತಮ್ಮ ಕ್ಷೇತ್ರದಲ್ಲಿ ಮತದಾರರ ಮೇಲೆ ಹಣ ಹಂಚುವ ಮೂಲಕ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುವುದರೊಂದಿಗೆ ಈ ವಿಡಿಯೋ ರಾಜಕೀಯ ಚರ್ಚೆಗೆ ಕಾರಣವಾಯಿತು. ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ವಿಡಿಯೋದಲ್ಲಿ ಸಚಿವರು ಜನರಿಗೆ ಹಣವನ್ನು ವಿತರಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಅವರು ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ಇದು ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು