ಬೆಂಗಳೂರು(04-02-2021): ಕರ್ನಾಟಕ ವಿಧಾನ ಸಭೆಯಲ್ಲಿ ಆಡಳಿತರೂಢ ಬಿಜೆಪಿ ಪಕ್ಷದ ಸದಸ್ಯರಿಂದಲೇ ಸಚಿವರು ಮುಜುಗರಕ್ಕೆ ಈಡಾಗಿದ್ದಾರೆ.
ವಿಧಾನ ಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಗೆ ಸಚಿವ ಪಿ. ಯೋಗೀಶ್ವರ್ ಕೊಟ್ಟ ಉತ್ತರದಲ್ಲಿ ಅವರ ಸಹಿಯೇ ಇರಲಿಲ್ಲ. ಇದನ್ನು ಸಭಾಧ್ಯಕ್ಷರ ಮುಂದೆ ಅಪ್ಪಚ್ಚು ರಂಜನ್ ಪ್ರಶ್ನಿಸಿದ್ದು, ಯೋಗೀಶ್ವರ್ ಗೆ ಇರುಸು ಮುರುಸು ಉಂಟಾಗಿದೆ.
ಸರಕಾರ ನೀಡಿರುವ ಉತ್ತರದಲ್ಲಿ ಸಚಿವರ ಸಹಿ ಇಲ್ಲವೆಂದರೆ ಅವರು ಈ ಖಾತೆಯ ಮಂತ್ರಿಯೋ ಅಥವಾ ಇಲ್ಲವೋ ಎಂಬುದು ಹೇಗೆ ತಿಳಿಯುತ್ತದೆ ಎಂದು ಅಪ್ಪಚ್ಚು ರಂಜನ್ ಸಭಾಧ್ಯಕ್ಷರಿಗೆ ಪ್ರಶ್ನಿಸಿದ್ದಾರೆ. ಇದು ಸದನದಲ್ಲಿ ಸಚಿವರಿಗೆ ಮುಜುಗರವನ್ನು ಉಂಟು ಮಾಡಿದೆ.