ಉತ್ತಪ್ರದೇಶ(04-10-2020): ಹೆಣ್ಣು ಮಕ್ಕಳಿಗೆ ಸಭ್ಯತೆಯಿಂದ ವರ್ತಿಸುವುದನ್ನು ಕಲಿಸಿದರೆ ಅತ್ಯಾಚಾರ ಪ್ರಕರಣಗಳನ್ನು ನಿಲ್ಲಿಸಲು ಸಾಧ್ಯ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಬೇಜವಾಬ್ಧಾರಿಯುತ ಹೇಳಿಕೆಯನ್ನು ಕೊಟ್ಟಿದ್ದು ಟೀಕೆಗೆ ಕಾರಣವಾಗಿದೆ.
ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ಅತ್ಯಾಚಾರಿಗಳನ್ನು ಸಮರ್ಥಿಸುವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ.
ಅತ್ಯಾಚಾರ ಪ್ರಕರಣಗಳನ್ನು ಸಮಾಜದಲ್ಲಿ ನಿಲ್ಲಿಸಲು ನಮ್ಮ ಮಕ್ಕಳಿಗೆ ಉತ್ತಮ ಮೌಲ್ಯಗಳು, ಗುಣನಡತೆಯನ್ನು ಹೇಳಿಕೊಡಬೇಕೆ ಹೊರತು ಅದು ಸರ್ಕಾರದ ಉತ್ತಮ ಆಡಳಿತ ಅಥವಾ ಕತ್ತಿಯಿಂದಲ್ಲ ಎಂದು ಹೇಳಿಕೆ ನೀಡಿ ಮಹಿಳಾ ರಕ್ಷಣೆ ಬಗ್ಗೆ ಸರಕಾರದ ಜವಾಬ್ಧಾರಿಯನ್ನು ಅಲ್ಲೆಗಳೆದಿದ್ದಾರೆ.
ಸುಸಂಸ್ಕೃತ ಪರಿಸರದಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ಬೆಳೆಸುವುದು ಪ್ರತಿಯೊಬ್ಬ ಪೋಷಕರ ಧರ್ಮ. ಮಕ್ಕಳು ಸಭ್ಯತೆಯಿಂದ ವರ್ತಿಸುವುದನ್ನು ಹೇಳಿಕೊಡಬೇಕು. ಸರ್ಕಾರ ಮತ್ತು ಜನರ ಉತ್ತಮ ಮೌಲ್ಯಗಳಿಂದ ಒಂದು ಸುಂದರ ದೇಶ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದ್ದಾರೆ.