ಬಿಜೆಪಿ ಶಾಸಕನಿಗೆ ಐದು ವರ್ಷ ಜೈಲು?

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ಯುಪಿ: ಕಾಲೇಜು ಪ್ರವೇಶಾತಿಗಾಗಿ ನಕಲಿ ಅಂಕಪಟ್ಟಿ ಬಳಸಿದ ಆರೋಪದಡಿಯಲ್ಲಿ ಉತ್ತರ ಪ್ರದೇಶದಲ್ಲಿ ಶಾಸಕರಿಗೆ ವಿಶೇಷ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಉತ್ತರ ಪ್ರದೇಶದ ಅಯೋಧ್ಯೆಯ ಗೋಸಾಯಿಗಂಜ್ ನ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ಅಲಿಯಾಸ್ ಖಬ್ಬು ತಿವಾರಿ ಶಿಕ್ಷೆಗೆ ಒಳಗಾಗಿದ್ದು, ವಿಧಾನಸಭೆ ಸದಸ್ಯತ್ವ ಕೂಡ ರದ್ದಾಗಿದೆ.

1992ರಲ್ಲಿಯೇ ಅಯೋಧ್ಯೆಯ ಸಾಕೇತ್ ಪದವಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಯದುವಂಶ ರಾಮ್ ತ್ರಿಪಾಠಿ ಆರೋಪಿ ತಿವಾರಿ ವಿರುದ್ಧ ನಕಲಿ ಅಂಕಪಟ್ಟಿ ಬಳಕೆ ಮಾಡಿರುವ ಕುರಿತು ರಾಮಜನ್ಮ ಭೂಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಅಯೋಧ್ಯೆಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪೂಜಾ ಸಿಂಗ್, ಈ ಕುರಿತು ತೀರ್ಪು ನೀಡುವುದರೊಂದಿಗೆ ಆರೋಪಿಗೆ ರೂ. 8 ಸಾವಿರ ದಂಡ ವಿಧಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು