ದಿಶಾ ರವಿ ಸೇರಿದಂತೆ ದೇಶವಿರೋಧಿಗಳನ್ನು ಹೊಡೆದು ಹಾಕಿ- ಪ್ರಚೋದನಾತ್ಮಕ ಹೇಳಿಕೆ ಕೊಟ್ಟ ಬಿಜೆಪಿ ಸಚಿವ

disha ravi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಂಡೀಗಢ (15-02-2021): ದಿಶಾ ರವಿ ಸೇರಿದಂತೆ ಎಲ್ಲಾ ದೇಶ ವಿರೋಧಿಗಳನ್ನು ಸಂಪೂರ್ಣ ಹೊಡೆದು ಹಾಕಬೇಕು ಎಂದು ಹರಿಯಾಣ ಬಿಜೆಪಿ ಸಚಿವ ಅನಿಲ್ ವಿಜ್ ವಿವಾದಾತ್ಮಕ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ್ದಾರೆ.

ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಶೇರ್ ಮಾಡಿದ್ದ ಟೂಲ್‌ ಕಿಟ್‌ ನ್ನು ಸಿದ್ದಪಡಿಸಿದ ಆರೋಪದ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಗ್ಗೆ ಪ್ರತಿಕ್ರಿಯಿಸಿದ  ಹರಿಯಾಣದ ಸಚಿವ ಅನಿಲ್ ವಿಜ್ ರಾಷ್ಟ್ರ ವಿರೋಧಿ ಬೀಜವನ್ನು ಬಿತ್ತುವವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ರಾಷ್ಟ್ರ ವಿರೋಧಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಅದು ದಿಶಾ ರವಿ ಆಗಿರಲಿ ಅಥವಾ ಬೇರೆಯವರೇ ಆಗಿರಲಿ ಎಂದು ಸಚಿವ ಟ್ವೀಟ್ ಮಾಡಿ ವಿವಾದವನ್ನು ಸೃಷ್ಟಿಸಿದ್ದಾರೆ.

ದಿಶಾ ರವಿಯನ್ನು ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿದ ಟೂಲ್ ಕಿಟ್ ಸಿದ್ದಪಡಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಅವರ ಮೇಲೆ ದೇಶದ್ರೋಹದ ಕೇಸ್ ನ್ನು ದಾಖಲಿಸಲಾಗಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು