ಅಧಿಕಾರಕ್ಕೆ ಬಂದರೆ ಪೊಲೀಸರು ಬೂಟುಗಳನ್ನು ನೆಕ್ಕುವಂತೆ ಮಾಡುತ್ತೇನೆ| ಹೇಳಿಕೆ ಕೊಟ್ಟ ಹಿರಿಯ ಬಿಜೆಪಿ ನಾಯಕ

Raju Banerjee
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಶ್ಚಿಮ ಬಂಗಾಳ(25-11-2020): 2021 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳ ಪೊಲೀಸರನ್ನು ಬೂಟುಗಳನ್ನು ನೆಕ್ಕುವಂತೆ ಮಾಡುತ್ತೇನೆ ಎಂದು ಬಿಜೆಪಿ ಉಪಾಧ್ಯಕ್ಷ ರಾಜು ಬ್ಯಾನರ್ಜಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಮೇಲೆ ಟೀಕೆ ಮಾಡಿದ ಬಿಜೆಪಿ ಮುಖಂಡ, ಪಶ್ಚಿಮ ಬಂಗಾಳದಲ್ಲಿ ಇತ್ತೀಚಿನ ದಿನಗಳಲ್ಲಿ ಏನು ನಡೆಯುತ್ತಿದೆ ಎಂದು ನೋಡಿ, ರಾಜ್ಯದಲ್ಲಿ ‘ಗುಂಡಾ ರಾಜ್’ ಮೇಲುಗೈ ಸಾಧಿಸುತ್ತಿದೆ. ಪೊಲೀಸರು ಯಾವುದೇ ಸಹಾಯವನ್ನು ನೀಡುತ್ತಿಲ್ಲ. ಅಂತಹ ಪೊಲೀಸ್ ಸಿಬ್ಬಂದಿಯೊಂದಿಗೆ ಏನು ಮಾಡಬೇಕು? ನಾವು ಅವರನ್ನು ಬೂಟ್ ನೆಕ್ಕುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ನಿನ್ನೆ ದುರ್ಗಾಪುರದಲ್ಲಿ ನೀಡಿದ ಈ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು