ನವದೆಹಲಿ(16-10-2020): ಉತ್ತರ ಪ್ರದೇಶದ ಬಲ್ಲಿಯಾ ಗ್ರಾಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡ 46 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಅಧಿಕಾರಿಗಳ ಪ್ರಕಾರ, ಗ್ರಾಮದಲ್ಲಿ ರೇಷನ್ ಅಂಗಡಿಗಳ ಹಂಚಿಕೆ ಕುರಿತು ನಡೆದ ಸಭೆಯಲ್ಲಿ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ನಾಥ್ ಅವರ ಪ್ರಕಾರ ಸ್ವ-ಸಹಾಯದ ಸದಸ್ಯರ ನಡುವಿನ ವಿವಾದದಿಂದಾಗಿ ಸಭೆ ಸ್ಥಗಿತಗೊಳಿಸಲು ಎಸ್ಡಿಎಂ ನಿರ್ಧರಿಸಿದ ನಂತರ ಜೈ ಪ್ರಕಾಶ್ (46) ಅವರನ್ನು ಧೀರೇಂದ್ರ ಪ್ರತಾಪ್ ಸಿಂಗ್ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಿದ್ದಾರೆ.
ಬಲಿಯಾ ಜಿಲ್ಲೆಯ ಬಿಜೆಪಿಯ ಮಾಜಿ ಸೈನಿಕರ ಘಟಕದ ಮುಖ್ಯಸ್ಥ ಧಿರೇಂದ್ರ ಪ್ರತಾಪ್ ಸಿಂಗ್ ಕೃತ್ಯವನ್ನು ಎಸಗಿದಾತ.
ಘಟನೆಯ ಬಗ್ಗೆ ಗಂಭೀರವಾಗಿ ಗಮನಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಥಳದಲ್ಲಿದ್ದ ಎಸ್ಡಿಎಂ, ಸಿಒ ಮತ್ತು ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನಿಶ್ ಅವಸ್ಥಿಗೆ ಹೇಳಿದ್ದಾರೆ.