ಕೊಳಕು ಸೃಷ್ಟಿಸುವ ಬಿಜೆಪಿ ಐಟಿ ಸೆಲ್ ಮುಖೇಡಿಗಳಿಗೆ ಮೆಟ್ಟಿನಲ್ಲಿ ಬಾರಿಸಬೇಡವೇ? ಎಂದ ಬ್ರಿಜೇಶ್ ಕಾಳಪ್ಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ಸೋನಿಯಾಗಾಂಧಿಯವರನ್ನು ನಿಂದಿಸುತ್ತಿರುವ ಕೊಳಕನ್ನು ಸೃಷ್ಟಿ ಮಾಡಿ ಬಿಜೆಪಿ ಐಟಿ ಸೆಲ್ ಮುಖೇಡಿಗಳಿಗೆ ಮೆಟ್ಟಿನಲ್ಲಿ ಬಾರಿಸಬೇಕು ಬಾರಿಸಬೇಕು ಎನಿಸುವುದಿಲ್ಲವೇ ಎಂದು ಕಾಂಗ್ರೆಸ್ ವಕ್ತಾರ, ನ್ಯಾಯವಾದಿ ಬ್ರಿಜೇಶ ಕಾಳಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಮೂಲ ಕಾರಣ ಏನೆಂದರೆ ಕಾಂಗ್ರೇಸ್ ನಾಯಕಿ ಸೋನಿಯಾ ಗಾಂಧಿ ಅವರ ಪೋಟೊ ಒಂದನ್ನು ಎಡಿಟ್ ಮಾಡಿ ಸುಳ್ಳು ಸುದ್ಧಿ ಹರಡಿಸಿದ ಬಿಜೆಪಿ ಐಟಿ ಸೆಲ್ ವಿರುದ್ಧ ಬ್ರಿಜೇಶ್ ಕಾಳಪ್ಪ ನವರು ಪೋಸ್ಟ್ ಒಂದು ಹಾಕಿದ್ದಾರೆ.

ಆ ಪೋಸ್ಟ್ ಇಲ್ಲಿದೆ,
ನೆಹರೂ-ಗಾಂಧಿ ಕುಟುಂಬದ ಸದಸ್ಯರ ತೇಜೋವಧೆಗಾಗಿ ಬಿಜೆಪಿ ಐಟಿ ಸೆಲ್ ವಾರ್ಷಿಕವಾಗಿ 100 ಕೋಟಿಗೂ ಹೆಚ್ಚು ಖರ್ಚು ಮಾಡುತ್ತದೆ. ಇದು ಅವರ ಹೊಸ ಪ್ರಯತ್ನ- ಸೋನಿಯಾ ಗಾಂಧಿಯವರ ಫೊಟೋ ಒಂದರ ಹಿನ್ನೆಲೆಯಲ್ಲಿರುವ ಒಂದು ಪುಸ್ತಕದಲ್ಲಿ “ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ” ಎಂದು ಬರೆಯಲಾಗಿದೆ. ಕುತೂಹಲಕ್ಕೆ ನೀವು ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ ಈ ಪುಸ್ತಕ ಲಭ್ಯವಿದೆಯೇ ಎಂದು ಕೇಳಿನೋಡಿ.

ಈ ಪುಸ್ತಕ ಅಸ್ತಿತ್ವದಲ್ಲಿಯೇ ಇಲ್ಲ ಎಂದು ಎರಡೂ ಸಂಸ್ಥೆಗಳು ಹೇಳುತ್ತವೆ. ಸೋನಿಯಾ ಗಾಂಧಿಯವರ ತೇಜೋವಧೆಗೆ ಇಂಥ‌ ಕೊಳಕನ್ನು ಸೃಷ್ಟಿ ಮಾಡಿ ಬಿಜೆಪಿ ಐಟಿ ಸೆಲ್ ಹರಿಬಿಟ್ಟಿದೆ. ಮೂಲ ಚಿತ್ರವನ್ನು ಗಮನಿಸಿ. ಎಡಿಟೆಡ್ ಚಿತ್ರವನ್ನೂ ನೋಡಿ. ಕಪಾಟಿನ ಒಂದು
ಪುಸ್ತಕದ ಲೇಬಲ್ ಬದಲಿಸಿ, ಸೋನಿಯಾಗಾಂಧಿಯವರನ್ನು ನಿಂದಿಸುತ್ತಿರುವ ಮುಖೇಡಿಗಳಿಗೆ ಮೆಟ್ಟಿನಲ್ಲಿ ಬಾರಿಸಬೇಕು, ಬಾರಿಸಬೇಕು ಎನಿಸುವುದಿಲ್ಲವೇ? ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಅವರು ಬಿಜೆಪಿ ಐಟಿ ಸೆಲ್ ವಿರುದ್ಧ ಕಿಡಿಕಾರಿದ ಅವರು ಅವರನ್ನು ಚಪ್ಪಲಿಯಿಂದ ಹೊಡೆಯಬೇಕು ಎಂದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು