ಬಿಜೆಪಿಯವರು ಹಣ ನೀಡಿದರೆ ಪಡೆದುಕೊಳ್ಳಿ, ಮತ ಮಾತ್ರ ಟಿಎಂಸಿಗೆ ಹಾಕಿ | ಮಮತಾ ಬ್ಯಾನರ್ಜಿ ಹೇಳಿಕೆ

mamatha banarjee
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೋಲ್ಕತ್ತಾ: ಬಿಜೆಪಿಯವರು ಹಣ ನೀಡಿದರೆ ತೆಗೆದುಕೊಳ್ಳಿ ಆದರೆ, ಮತ ತೃಣಮೂಲ ಕಾಂಗ್ರೆಸ್ ಗೆ ಹಾಕಿ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭಾನುವಾರ ಜನರಿಗೆ ಕರೆ ನೀಡಿದ್ದಾರೆ.

 

ಪ್ರಧಾನಿ ನರೇಂದ್ರ ಮೋದಿ ಕೋಲ್ಕತ್ತಾದಲ್ಲಿ ರ್ಯಾಲಿ ನಡೆಸಿದ ಬಳಿಕ ಸಿಲಿಗುರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿಯವರ ಆಟಗಳಿಗೆ ವಿರುದ್ಧವಾಗಿ ನಾವು ಆಡಲು ಸಿದ್ಧರಾಗಬೇಕು. ಅವರು ನಿಮ್ಮ ಮತಗಳನ್ನು ಖರೀದಿಸಲು ಯತ್ನಿಸಿದರೆ, ಹಣ ತೆಗೆದುಕೊಳ್ಳಿ, ನಿಮ್ಮ ಮತಗಳನ್ನು ಟಿಎಂಸಿಗೆ ನೀಡಿ ಎಂದು ಮಮತಾ ಬ್ಯಾನರ್ಜಿ ಕರೆ ನೀಡಿದರು.

 

ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ,   ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು  ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ ಹಾಗೂ ಬಿಹಾರದ ಮಹಿಳೆಯರು ಎಷ್ಟು ಸುರಕ್ಷಿತವಾಗಿದೆ ಎನ್ನುವುದನ್ನು ನೋಡಿ, ಹೇಳಿಕೆ ನೀಡಲಿ ಎಂದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು