ಚುನಾವಣೆ ಹತ್ತಿರ ಬರುತ್ತಿದ್ದಂತೆ ನಿತೀಶ್ ಕುಮಾರಿಂದ ದೂರವಾಗುತ್ತಿದೆ ಬಿಜೆಪಿ? ಸಾಕ್ಷ್ಯಾಗಳು ಏನು ಹೇಳುತ್ತದೆ?

nithesh kumar
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಾಟ್ನಾ(27-10-2020): ಬಿಹಾರದಲ್ಲಿ, ಮೊದಲ ಸುತ್ತಿನ ಚುನಾವಣೆಗೆ ಸಮೀಪಿಸುತ್ತಿದ್ದಂತೆ, ಬಿಜೆಪಿ ನಿತೀಶ್ ಕುಮಾರ್ ಅವರಿಂದ ದೂರವಾಗುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಯಕತ್ವದ ವಿರುದ್ಧ ಚಿರಾಗ್ ಪಾಸ್ವಾನ್ ಅವರ ರೆಬೆಲ್ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೂಡ ಕಳೆದ ವಾರ ರಾಜ್ಯದಲ್ಲಿ ತಮ್ಮ ರ್ಯಾಲಿಗಳಲ್ಲಿ ಎನ್‌ಡಿಎಗೆ ಮತಗಳನ್ನು ಕೋರಿದರು ಮತ್ತು ತಮ್ಮ ಭಾಷಣದ ಕೊನೆಯಲ್ಲಿ ನಿತೀಶ್ ಕುಮಾರ್ ಅವರ ಬಗ್ಗೆ ಕೇವಲ ಸ್ವಲ್ಪ ಮಾತ್ರ ಪ್ರಸ್ತಾಪಿಸಿ ಸಂಶಯಕ್ಕೆ ಆಸ್ಪದ ಮಾಡಿದ್ದಾರೆ.

ಕಳೆದ ವಾರಗಳಲ್ಲಿ, ಎರಡು ಮಿತ್ರಪಕ್ಷಗಳು ಪ್ರಾಯೋಗಿಕವಾಗಿ ಯಾವುದೇ ವಿರೋಧವಿಲ್ಲದಂತೆ ಸಮಾನಾಂತರ ಅಭಿಯಾನಗಳನ್ನು ನಡೆಸುತ್ತಿವೆ. ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮತ್ತು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಹೊರತುಪಡಿಸಿ, ಯಾವುದೇ ಪ್ರಮುಖ ಬಿಜೆಪಿ ಮುಖಂಡರು ನಿತೀಶ್ ಕುಮಾರ್ ಅಥವಾ ಅವರ ಜನತಾದಳ ಯುನೈಟೆಡ್ ರ‍್ಯಾಲಿಗಳಲ್ಲಿ ಕಾಣಿಸಿಕೊಂಡಿಲ್ಲ.

ಈಗ ಸುಶೀಲ್ ಮೋದಿ ಅವರು ಕರೋನವೈರಸ್ ಗೆ ತುತ್ತಾಗಿದ್ದಾರೆ. ಬಿಜೆಪಿ ವಿಡಿಯೋ ಅಭಿಯಾನದಲ್ಲಿ ಕೂಡ ನಿತೀಶ್ ಕುಮಾರ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ರಾಜ್ಯಾದ್ಯಂತ ಬಿಜೆಪಿ ಹೋರ್ಡಿಂಗ್‌ಗಳಲ್ಲಿ ಪಿಎಂ ಮೋದಿಯವರ ಮಾತ್ರ ಚಿತ್ರಗಳಿವೆ. ಅದೇ ರೀತಿ ಜನತಾದಳ ಯುನೈಟೆಡ್ ಅಭಿಯಾನವು ನಿತೀಶ್ ಕುಮಾರ್ ಬಗ್ಗೆ ಮಾತ್ರ ಮಾತನಾಡುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟರ್‌ಗಳು ಮತ್ತು ಕಟೌಟ್‌ಗಳು ಮಾತ್ರ ರ್ಯಾಲಿಗಳಲ್ಲಿ ಏಕೆ ಹೆಚ್ಚು ಗೋಚರಿಸುತ್ತವೆ? ನಿತೀಶ್ ಕುಮಾರ್ ಅವರ ಪಕ್ಷದವರೂ ಕೂಡ ಯಾರೂ ಎನ್‌ಡಿಎ ಅಭಿಯಾನಕ್ಕೆ ಬರುವುದು ಕಾಣಿಸುತ್ತಿಲ್ಲ.

ಪ್ರಧಾನಿ, ಕಳೆದ ವಾರ ರಾಜ್ಯದಲ್ಲಿ ತಮ್ಮ ಮೂರು ಭಾಷಣಗಳಲ್ಲಿ ನಿತೀಶ್ ಕುಮಾರ್ ಬಗ್ಗೆ ಪ್ರಸ್ತಾಪಿಸಿಲ್ಲ. ಇದರಿಂದಾಗಿ ಬಿಜೆಪಿ ನಿತೇಶ್ ಕುಮಾರ್ ಅವರನ್ನು ದೂರ ಇಟ್ಟಿದೆಯಾ ಎಂಬ ಪ್ರಶ್ನೆ ಮೂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು