ಬಿಜೆಪಿ ಕರೊನಗಿಂತಲೂ ಭೀಕರ ವೈರಸ್: ಬೆಡ್ ಬ್ಲಾಕಿಂಗ್ ದಂಧೆಯ ರೂವಾರಿಗಳಿಗೆ ಬಂಧಿಸುವಂತೆ ಕಾಂಗ್ರೆಸ್ ಆಗ್ರಹ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸುವುದೆಂದರೆ ಇದೇ. ಬಿಜೆಪಿಗರೇ ಬೆಡ್ ಬ್ಲಾಕಿಂಗ್ ದಂಧೆಯ ರೂವಾರಿಗಳು, ಎಂಬ ಸತ್ಯ ಹೊರಬಂದಿದೆ. ವಾರ್ ರೂಮಿನಲ್ಲಿ ತಮ್ಮದೇ ಪಟಾಲಂ ಬಿಟ್ಟು ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ಶಾಸಕ ಸತೀಶ್ ರೆಡ್ಡಿ, ಅದಕ್ಕೆ ಸಹಕರಿಸಿದ ಎಳೆಸಂಸದನನ್ನು ಕೂಡಲೇ ಬಂಧಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್ ಆಗ್ರಹಿಸಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್,
ಅಂತೆಯೇ ಮೊನ್ನೆ ಸತೀಶ್ ರೆಡ್ಡಿ ಸೋಂಕಿತರ ಹೆಸರು ಬಹಿರಂಗಪಡಿಸಬೇಡಿ ಎಂದು ಮಾಧ್ಯಮಗಳ ಎದುರು ಅವಲತ್ತುಕೊಂಡಿದ್ದು ತನ್ನ ಗೋಲ್ಮಾಲ್ ಬಹಿರಂಗವಾಗಬಹುದು ಎನ್ನುವ ಕಾರಣಕ್ಕೆ. ಆದರೆ ಹಗರಣದ ಸತ್ಯ ಹೊರಬರಲೇಬೇಕು, ಈಗ ಬಂದಿದೆ.
ಶಾಸಕ ಸತೀಶ್ ರೆಡ್ಡಿ ಅವರಿಗೆ ಬಂಧಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

ಬಿಜೆಪಿ ಕರೊನಗಿಂತಲೂ ಭೀಕರ ವೈರಸ್”
ಜನ ನರಳಿ ನರಳಿ ಸಾಯುತ್ತಿದ್ದಾರೆ, ಬಿಬಿಎಂಪಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ತಾವೇ ಕಿಂಗ್ ಪಿನ್‌ಗಳಾಗಿ, ತಾವೇ ಹಗರಣ ಬಯಲಿಗೆಳೆಯುವ ನಾಟಕವಾಡಿ ಅದಕ್ಕೆ ಕೋಮುಬಣ್ಣ ಲೇಪಿಸಿದ “ಮಹಾನಾಟಕ” ಬಯಲಾಗಿದೆ. ತಮ್ಮ ಭ್ರಷ್ಟಾಚಾರ ಹಾಗೂ ವೈಫಲ್ಯ ಮರೆಮಾಚಲು ನಡೆಸಿದ ಕುತಂತ್ರ ಬೆತ್ತಲಾಗಿದೆ.

ಚಿತೆಯಲ್ಲಿ ಚಳಿ ಕಾಯಿಸುವ ನೀಚತನ ಇರುವುದು ಬಿಜೆಪಿಗೆ ಮಾತ್ರ.ಕಳೆದ ಭಾರಿ ಬೆಡ್ ಖರೀದಿ ಹಗರಣ, ಈ ಭಾರಿ ಬೆಡ್ ಬ್ಲಾಕಿಂಗ್ ಹಗರಣ.ಹಗರಣ ಮಾಡಿದ ತೋಳಗಳೇ ಮೊಲಗಳಂತೆ ಮುಖವಾಡ ಧರಿಸಿ ಹಗರಣ ಬಯಲಿಗೆಳೆಯುವ ಮಹಾನಾಟಕ ಮಾಡಿದ್ದವು! ಬಿಜೆಪಿಗೂ ಹಾಸಿಗೆಗೂ ಭಾರಿ ನಂಟು!
ಅವರ ಹಾಸಿಗೆ ಹಗರಣ ಒಂದೆರಡಲ್ಲ. ಕಳೆದ ಭಾರಿ ಹಾಸಿಗೆ ಖರೀದಿ ಹಗರಣ, ನಂತರ ಹಾಸಿಗೆ ಮೇಲಿನ ಹಗರಣ, ಈಗ ಹಾಸಿಗೆ ಹಂಚಿಕೆಯ ಹಗರಣ
ಈ ಲಂಚ – ಮಂಚದ ಸರ್ಕಾರಕ್ಕೂ ಹಾಸಿಗೆಗೂ ಭಾರಿ ನಂಟು! ಎಂದು ಕಾಂಗ್ರೆಸ್ ಅಪಹಾಸ್ಯ ಮಾಡಿದೆ.

ಸಂಕಟದ ನಡುವೆಯೂ ಹಾಸಿಗೆ ಹೆಸರಲ್ಲಿ ಹೇಸಿಗೆ ನಡೆಸಿದ ಬಿಜೆಪಿ ಶಾಸಕ, ಸಂಸದರ ಬಂಧನವಾಗಬೇಕು. ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ, ಜಗತ್ತು ನೋಡದು ಎನ್ನುವ ಭ್ರಮೆಯಲ್ಲಿರುತ್ತದೆ! ಎನ್ನುವ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರನ್ನು ಬಂಧಿಸುವಂತೆ ಆಗ್ರಹಿಸಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರೀ ಟ್ರೆಂಡ್ ಆಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು