ಬಿಜೆಪಿ ಅಧಿಕಾರದಿಂದ ತೊಲಗಿದ ದಿನ ದೇಶ ನೈಜ ವ್ಯಾಕ್ಸಿನೇಟ್ ಆಗುವುದು : ನಟ ಸಿದ್ಧಾರ್ಥ ಟ್ವೀಟ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಲ್ಕತ್ತಾ: ಒಂದು ದಿನ ನೀವು ಅಧಿಕಾರದಿಂದ ಹೊರಬಂದಾಗ, ಈ ದೇಶ ನಿಜವಾಗಿಯೂ ವ್ಯಾಕ್ಸಿನೇಟ್ ಆಗುತ್ತದೆ. ಆ ದಿನಗಳು ಬಂದೇ ಬರುತ್ತಿವೆ, ನಾವು ಇನ್ನೂ ಇಲ್ಲಿಯೇ ಇರುತ್ತೇವೆ, ಕನಿಷ್ಠ ಈ ಒಂದು ಟ್ವೀಟ್ ನಿಮಗೆ ನೆನಪಿಗೆ ಇರಲಿ ಎಂದು ನಟ ಸಿದ್ದಾರ್ಥ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲರಿಗೂ ಕೋವಿಡ್ -19 ಲಸಿಕೆ ಉಚಿತವಾಗಿ ನೀಡಲಾಗುವುದು’ ಎಂದು ಪಶ್ಚಿಮ ಬಂಗಾಳ ಬಿಜೆಪಿಯು ತಮ್ಮ ಅಧಿಕೃತ ಟ್ವಿಟ್ಟರ್ ಮೂಲಕ ಘೋಷಿಸಿದ್ದಕ್ಕೆ ರೀಟ್ವೀಟ್ ಮಾಡಿದ ಸಿದ್ಧಾರ್ಥ ಬಿಜೆಪಿ ಪಕ್ಷದ ಆಡಳಿತ ವೈಖರಿಯನ್ನು ವಿರೋಧಿಸಿದ್ದಾರೆ.

 

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ಇಂಥ ಹಲವು ಹೇಳಿಕೆ, ಭರವಸೆಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದೆ. ಕೊರೊನಾ ಎರಡನೆಯ ಅಲೆಯಿಂದ ದೇಶದ ಜನ ತತ್ತರಿಸಿ ಹೋಗಿದ್ದಾರೆ, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ಪ್ರಚಾರ ಭರಾಟೆಯಲ್ಲಿ ನಿರತವಾಗಿ ಭರವಸೆ ನೀಡುವುದನ್ನು ಖಂಡಿಸಿದ ನಟ ಸಿದ್ಧಾರ್ಥ ದೇಶಕ್ಕೆ ಬಿಜೆಪಿ ಪಕ್ಷದಿಂದ ಉಳಿಗಾಲವಿಲ್ಲ, ಎಲ್ಲರೂ ತಿರಸ್ಕರಿಸಬೇಕೆಂಬ ಸಂದೇಶ ತಮ್ಮ ಟ್ವೀಟ್ ಮೂಲಕ ರವಾನಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು