ಮುಂಬೈ(23/10/2020): ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದ ಬಿಜೆಪಿಯ ಪ್ರಮುಖ ಮುಖಂಡ, ಮಾಜಿ ಸಚಿವ ಏಕನಾಥ್ ಖಡ್ಸೆ ಅವರು ಶರದ್ ಪವಾರ್ ಅವರ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷಕ್ಕೆ (ಎನ್ಸಿಪಿ) ಸೇರಿದರು.
ಮಾಜಿ ಮುಖ್ಯಂತ್ರಿ ದೇವೇಂದ್ರ ಫಡ್ನವಿಸ್ ನನ್ನ ರಾಜಕೀಯ ಜೀವನವನ್ನು ಹಾಳು ಮಾಡಿದರು ಎಂದು ಆರೋಪಿಸಿ ಬುಧವಾರವಷ್ಟೇ ಅವರು ಬಿಜೆಪಿ ತೊರೆದಿದ್ದರು. ಇಂದು ಎನ್ ಸಿಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಆ ಪಕ್ಷವನ್ನು ಸೇರಿದರು.
ಎನ್ಸಿಪಿ ಮುಖಂಡ ಜಯಂತ್ ಪಾಟೀಲ ಅವರು ಪಕ್ಷದ ಶಿರೋವಸ್ತ್ರ ನೀಡಿ ಏಕನಾಥ್ ಅವರನ್ನು ಬರಮಾಡಿಕೊಂಡರು.