ಬಿಹಾರದಲ್ಲಿ ಬಿಜೆಪಿಯಿಂದ ಭರವಸೆಯ ಸುರಿಮಳೆ| ಪ್ರಣಾಳಿಕೆಯಲ್ಲಿ ಇನ್ನೂ ಬಿಡುಗಡೆಯಾಗದ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಭರವಸೆ!

bjp
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಾಟ್ನಾ (22-10-2020): ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಣಾಳಿಕೆಯನ್ನು ಆಡಳಿತಾರೂಢ BJP ಮೈತ್ರಿ ಬಿಜೆಪಿ ಇಂದು ಬಿಡುಗಡೆಗೊಳಿಸಿದೆ. ಇದರಲ್ಲಿ 19 ಲಕ್ಷ ಉದ್ಯೋಗ ಮತ್ತು ಇನ್ನೂ ಬಿಡುಗಡೆಯಾಗದ ಎಲ್ಲರಿಗೂ ಉಚಿತ ಕರೋನವೈರಸ್ ಲಸಿಕೆ ನೀಡುವ ಭರವಸೆ ನೀಡಿದೆ.

ಮುಂದಿನ ಐದು ವರ್ಷಗಳ ಕಾಲ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷ ಒತ್ತಿಹೇಳಿದೆ. ಪ್ರತಿಪಕ್ಷ ನಾಯಕ ತೇಜಶ್ವಿ ಯಾದವ್ ಅವರು “10 ಲಕ್ಷ ಸರ್ಕಾರಿ ಉದ್ಯೋಗಗಳು” ಸೃಷ್ಟಿಸುತ್ತೇವೆ ಎಂಬ ಭರವಸೆಗಿಂತ 9ಲಕ್ಷ ಅಧಿಕವಾಗಿ ಬಿಜೆಪಿ ಹೇಳಿದೆ.

PRESS KANNADA

ಬಿಜೆಪಿಯ “ಸಂಕಲ್ಪ ಪತ್ರ” 19 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಿರ್ಧರಿಸಿದೆ. ತೇಜಶ್ವಿ ಯಾದವ್ ಅವರ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ತನ್ನ ರ್ಯಾಲಿಗಳಲ್ಲಿ ನಿತೀಶ್ ಸರಕಾರದ ವಿರುದ್ಧ ಉದ್ಯೋಗ ಸೃಷ್ಟಿಯ ಬಗ್ಗೆ ಟೀಕೆಯನ್ನು ಮಾಡಿದ್ದರು.

ಇತ್ತೀಚಿನ ಎರಡು ರ್ಯಾಲಿಗಳಲ್ಲಿ ನಿತೀಶ್ ಕುಮಾರ್ ಅವರು ತೇಜಶ್ವಿ ಅವರ ಉದ್ಯೋಗದ ಭರವಸೆಯನ್ನು ಅಪಹಾಸ್ಯ ಮಾಡುತ್ತಿದ್ದರು ಮತ್ತು ಅವರನ್ನು ಅನನುಭವಿ ಮತ್ತು ನಿಷ್ಕಪಟ ಎಂದು ಕರೆದರು.

ನಿತೀಶ್ ಕುಮಾರ್, ತೇಜಶ್ವಿ ಅವರ ಯೋಜನೆ ಮತ್ತು ಅವರ ರ್ಯಾಲಿಗಳಿಗೆ ಮೊದಲ ಪ್ರತಿಕ್ರಿಯೆಯಾಗಿ, ಅವರು 10 ಲಕ್ಷ ಉದ್ಯೋಗಗಳನ್ನು ನೀಡಲು ಹಣವನ್ನು ಹೇಗೆ ತರಲು ಯೋಚಿಸಿದ್ದಾರೆ  ಎಂದು ಪ್ರಶ್ನಿಸಿದ್ದರು.

ಬಿಜೆಪಿಯ ಪ್ರಣಾಳಿಕೆಯು ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಉಲ್ಲೇಖಿಸಿದ್ದು, ಇನ್ನು ಕೂಡ ಲಸಿಕೆ ಆವಿಷ್ಕಾರವಾಗಿಲ್ಲ ಎನ್ನುವುದು ಗಮನಿಸಬೇಕಾಗಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು