ಪಾಟ್ನಾ(18/10/2020): ತನ್ನ ವಿರುದ್ಧದ ಟೀಕೆಗೆ ಸ್ವಾಗತ, ಆದರೆ, ಪದಬಳಕೆಯಲ್ಲಿ ಎಚ್ಚರವಿರಲಿ ಎಂದು ಎಲ್ ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಮೋದಿ ಅಥವಾ ಬಿಜೆಪಿಯ ಯಾವುದೇ ನಾಯಕರು ತನ್ನ ವಿರುದ್ಧ ಟೀಕೆ ಮಾಡಲಿ. ಆ ಮೂಲಕ ಅವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಖುಷಿಪಡಿಸಿದರೆ ನನಗೇನೂ ಸಮಸ್ಯೆಯಿಲ್ಲ. ಆದರೆ, ಪದಬಳಕೆ ಮಾಡುವಾಗ ಮಾತ್ರ ಎಚ್ಚರವಿರಲಿ ಎಂದು ಅವರು ಗುಡುಗಿದ್ದಾರೆ.
ಚಿರಾಗ್ ಪಾಸ್ವಾನ್ ತನ್ನನ್ನು ಮೋದಿಯ ಹನುಮಾನ್ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗ್ರಹ ಸಚಿವ ಅಮಿತ್ ಶಾ ಚಿರಾಗ್ ಭ್ರಮೆಗೊಳಗಾಗಬಾರದು ಎಂದು ಟೀಕಿಸಿದ್ದರು.