ಕಾರ್ಪೋರೇಟ್ ಸಂಸ್ಥೆಗಳಿಂದ ಅತೀ ಹೆಚ್ಚು ದೇಣಿಗೆ ಪಡೆದ ಪಕ್ಷ ಬಿಜೆಪಿ ; ಎಡಿಆರ್ ಸಮೀಕ್ಷೆಯಲ್ಲಿ ಬಹಿರಂಗ

bjp
Share on facebook
Share on twitter
Share on linkedin
Share on whatsapp
Share on telegram
Share on email
Share on print

ಹೊಸದೆಹಲಿ(16/10/2020): 2018-19ನೇ ಸಾಲಿನಲ್ಲಿ ಇತರ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಕಾರ್ಪೋರೇಟ್​ಗಳು ಹಾಗೂ ವ್ಯಾಪಾರ ಸಂಸ್ಥೆಗಳಿಂದ ಅತಿ ಹೆಚ್ಚು ದೇಣಿಗೆಯನ್ನು ಪಡೆದಿರುವುದು ಮತದಾನದ ಹಕ್ಕುಗಳ ಅಸೋಸಿಯೇಷನ್​​ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

876 ಕೋಟಿ ರೂಪಾಯಿ ದೇಣಿಗೆಯಲ್ಲಿ ಬಿಜೆಪಿ 698 ಕೋಟಿ ರೂಪಾಯಿ ಪಡೆದು ಮೊದಲನೇ ಸ್ಥಾನದಲ್ಲಿದ್ದರೆ ಕಾಂಗ್ರೆಸ್​  122.5 ಕೋಟಿ ರೂಪಾಯಿ ಪಡೆದಿದೆ ಎಂದು ಎಡಿಆರ್​ ತನ್ನ ಸಮೀಕ್ಷೆಯಲ್ಲಿ ಹೇಳಿದೆ.

ವಿವಿಧ ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ 1573 ಕಾರ್ಪೋರೇಟ್​ ದಾನಿಗಳಿಂದ 698.082 ಕೋಟಿ ರೂಪಾಯಿ ಗಳಿಸಿದೆ. ಕಾಂಗ್ರೆಸ್​​ಗೆ 122 ಕಾರ್ಪೋರೇಟ್​ ದಾನಿಗಳು ಒಟ್ಟು 122 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಹಾಗೂ 17 ಕಾರ್ಪೋರೇಟರರ್ಸ್​ನಿಂದ 11.345 ಕೋಟಿ ರೂಪಾಯಿ ದೇಣಿಗೆ ಪಡೆದಿರುವ ಎನ್​ಸಿಪಿ ಮೂರನೇ ಸ್ಥಾನದಲ್ಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು