ಇದು ನಿಮ್ಮ ಹಿಂದುತ್ವವೇ?-ಬಿಜೆಪಿಗೆ ಪ್ರಶ್ನಿಸಿದ ಉದ್ದವ್ ಠಾಕ್ರೆ

uddav tackery
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಹಾರಾಷ್ಟ್ರ(26-10-2020): ನೀವು ನಮ್ಮ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದೀರಿ. ಆದ್ದರಿಂದ ಮಹಾರಾಷ್ಟ್ರದಲ್ಲಿ ನೀವು ಗೋಮಾಂಸವನ್ನು ನಿಷೇಧಿಸುತ್ತಿದ್ದೀರಿ, ಆದರೆ ಗೋವಾದಲ್ಲಿ ನೀವು ಗೋಮಾಂಸವನ್ನು ಯಾಕೆ ನಿಷೇಧಿಸಿಲ್ಲ. ಇದು ನಿಮ್ಮ ಹಿಂದುತ್ವವೇ? ಬಿಜೆಪಿಗೆ ಡಬಲ್ ಸ್ಟ್ಯಾಂಡರ್ಡ್ ಇದೆ ಎಂದು ಉದ್ದವ್ ಠಾಕ್ರೆ ವಾಗ್ಧಾಳಿಯನ್ನು ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವಿನ ಕಚ್ಚಾಟ ದಸರಾ ದಿನದಂದು ಕೂಡ ಮುಂದುವರಿದಿದೆ, ನಾವು ಇನ್ನೂ ದೇವಾಲಯಗಳನ್ನು ತೆರೆಯದ ಕಾರಣ ಹಿಂದುತ್ವದ ಬಗ್ಗೆ ನಮಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂದು ಉದ್ದವ್ ಠಾಕ್ರೆ ಅವರು ರಾಜ್ಯಪಾಲರನ್ನು ಹೆಸರಿಸದೆ ಹೇಳಿದ್ದಾರೆ.

ರಾಜ್ಯಪಾಲ ಕೋಶಿಯಾರಿ ಅವರು ವ್ಯಂಗ್ಯವಾಗಿ, ಠಾಕ್ರೆ ಅವರೀಗ ‘ಜಾತ್ಯತೀತರಾಗಿ’ ಬದಲಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದರು.ಮಹಾರಾಷ್ಟ್ರದಲ್ಲಿ ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕಡಲತೀರಗಳನ್ನು ತೆರೆಯಲಾಗಿದೆ. ಆದರೆ ದೇವರು ಮತ್ತು ದೇವತೆಗಳನ್ನು ಇನ್ನೂ ಲಾಕ್‌ಡೌನ್‌ನಲ್ಲಿಟ್ಟಿರುವುದು ವಿಪರ್ಯಾಸ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಠಾಕ್ರೆ, ನನಗೆ ಯಾರಿಂದಲೂ ಹಿಂದುತ್ವ ಪ್ರಮಾಣಪತ್ರದ ಅಗತ್ಯವಿಲ್ಲ ಮತ್ತು ಈ ವಿಚಾರದ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವ ವಹಿಸಿರುವ ಮೋಹನ್ ಭಾಗವತ್ ಅವರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮೋಹನ್ ಭಾಗವತ್ ಅವರು ಹಿಂದುತ್ವವು ಪೂಜೆಗಳೊಂದಿಗೆ ಮಾತ್ರ ಸಂಬಂಧ ಹೊಂದಿಲ್ಲ ಎಂದು ಹೇಳಿದರು. ಆದ್ದರಿಂದ ಜನರು ಕಪ್ಪು ಟೋಪಿ ಧರಿಸಿ ನಮ್ಮ ನಂಬಿಕೆಗಳನ್ನು ಪ್ರಶ್ನಿಸುವ ಮತ್ತು ನಮ್ಮನ್ನು ಜಾತ್ಯತೀತ ಎಂದು ಕರೆಯಬೇಕು ಎನ್ನುವವರ ಇಂದು ಭಾಷಣವನ್ನು ನಾವು ಇಂದು ಕೇಳಬೇಕು ಎಂದು ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು