ಶಾಕಿಂಗ್: ಮನುಷ್ಯನಲ್ಲಿ ಹಕ್ಕಿ ಜ್ವರದ ವೈರಸ್ ಪತ್ತೆ

bird flue
Share on facebook
Share on twitter
Share on linkedin
Share on whatsapp
Share on telegram
Share on email
Share on print

ರಷ್ಯಾ(21-02-2021): ಹಕ್ಕಿಗಳಲ್ಲಿ ಕಂಡು ಬರುವ ವೈರಸ್ ಇದೇ ಮೊದಲ ಬಾರಿಗೆ ಮನುಷ್ಯನಲ್ಲಿ ಕೂಡ ಪತ್ತೆಯಾಗಿದೆ ಎಂದು ರಷ್ಯಾದ ಆರೋಗ್ಯ ಕಣ್ಗಾವಲು ಸಮಿತಿ ಮಾಹಿತಿಯನ್ನು ನೀಡಿದೆ.

ಹಕ್ಕಿಜ್ವರಕ್ಕೆ ಕಾರಣವಾಗುವ ಎಚ್5ಎನ್8 ವೈರಸ್ ದಕ್ಷಿಣ ರಷ್ಯಾದ ಕೋಳಿ ಫಾರಂ ಒಂದರಲ್ಲಿ  ಕೆಲಸ ಮಾಡುತ್ತಿದ್ದ 7 ಮಂದಿಯಲ್ಲಿ ಪತ್ತೆಯಾಗಿದೆ ಎಂದು ರಷ್ಯಾ ಆರೋಗ್ಯ ಕಣ್ಗಾವಲು ಸಮಿತಿಯ ಮುಖ್ಯಸ್ಥೆ ಅನ್ನಾ ಪೊಪೋವಾ ತಿಳಿಸಿದ್ದಾರೆ.

ವಿಕ್ಟರ್ ಪ್ರಯೋಗಾಲಯದ ವಿಜ್ಞಾನಿಗಳು ಮನುಷ್ಯನಲ್ಲಿ ಹಕ್ಕಿ ಜ್ವರದ ವೈರಸ್ ಪತ್ತೆ ಮಾಡಿದ್ದು, ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿಯನ್ನು ರವಾನಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು