ನವದೆಹಲಿ(05-01-2021): ಭಾರತದ ಹಲವಾರು ಭಾಗಗಳಲ್ಲಿ ಸಾವಿರಾರು ಪಕ್ಷಿಗಳ ನಿಗೂಢ ಸಾವು ಪಕ್ಷಿ ಜ್ವರದ ಬಗ್ಗೆ ಕಳವಳವನ್ನು ಉಂಟುಮಾಡಿದೆ.
ಹಿಮಾಚಲ ಪ್ರದೇಶದ ಪಾಂಗ್ ಅಣೆಕಟ್ಟು ಸರೋವರದಲ್ಲಿ ಸತ್ತಿರುವ ವಲಸೆ ಹಕ್ಕಿಗಳಲ್ಲಿ ಪಕ್ಷಿ ಜ್ವರ ಕಂಡು ಬಂದಿದೆ. ಇದನ್ನು ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯುತ್ತಾರೆ, ಏವಿಯನ್ ಇನ್ಫ್ಲುಯೆನ್ಸ (ಜ್ವರ) ಶಂಕಿತ ಪ್ರಕರಣಗಳನ್ನು ಐದು ರಾಜ್ಯಗಳು ವರದಿ ಮಾಡಿದೆ.
ಹರಿಯಾಣ, ರಾಜಸ್ಥಾನ, ಕೇರಳ ಮತ್ತು ಮಧ್ಯಪ್ರದೇಶಗಳಲ್ಲಿ ವೈರಸ್ ಕಂಡು ಬಂದಿದೆ. ರಾಜಸ್ಥಾನದಲ್ಲಿ, ಸೋಮವಾರ 170 ಕ್ಕೂ ಹೆಚ್ಚು ಹೊಸ ಪಕ್ಷಿಗಳ ಸಾವುಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 400 ಕ್ಕಿಂತ ಹೆಚ್ಚಾಗಿದೆ. ಕೇರಳದಲ್ಲಿ, ಕೊಟ್ಟಾಯಂ ಮತ್ತು ಆಲಪ್ಪುಝ ಜಿಲ್ಲೆಗಳಲ್ಲಿ 1 ಕಿ.ಮೀ ವ್ಯಾಪ್ತಿಯಲ್ಲಿ ಬಾತುಕೋಳಿಗಳು ಮತ್ತು ಕೋಳಿಗಳಂತಹ ಪಕ್ಷಿಗಳನ್ನು ಕೊಲ್ಲುವುದು ನಡೆಯುತ್ತಿದೆ. ಹಿಮಾಚಲದ ಕಾಂಗ್ರಾ ಜಿಲ್ಲೆಯಲ್ಲಿ, ಸುಮಾರು 2,300 ವಲಸೆ ಹಕ್ಕಿಗಳು, ಹೆಚ್ಚಾಗಿ ಬಾರ್-ಹೆಡ್ ಹೆಬ್ಬಾತುಗಳು, ಪಾಂಗ್ ಅಣೆಕಟ್ಟು ಸರೋವರದಲ್ಲಿ ಸತ್ತಿದೆ. ಹಿಮಾಚಲದ ಕೆಲವೆಡೆ ಕೋಳಿ, ಮಾಂಸ ಮತ್ತು ಮಾಂಸ ಉತ್ಪನ್ನಗಳ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಲಾಗಿದೆ.